
ಪೂನಾಡಹಳ್ಳಿ ಗ್ರಾಮದಲ್ಲಿ ಭಾರತ ನಿರ್ಮಾಣ್ ಸೇವಾ ಕೇಂದ್ರ ಕಟ್ಟಡದ ಗುದ್ದಲಿ ಪೂಜೆ,
ಗಾಂಧಿನಗರ ಗ್ರಾಮದಲ್ಲಿ MGNRGA ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ವೀಕ್ಷಣೆ
ಬಾಳೆಕಟ್ಟೆ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ
ಎಂ.ಹೊಸಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸಿ.ಸಿ. ರಸ್ತೆ , ಆವರಣ ಗೋಡೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ
ಚಿಕ್ಕನೇರಳೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣ ಕಟ್ಟಡ ಉದ್ಘಾಟನೆ
ಗೊರಹಳ್ಳಿ ಗ್ರಾಮದಲ್ಲಿ MGNRGA ಯೋಜನೆಯಡಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ
ಅನಿವಾಳು ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸಿ.ಸಿ. ರಸ್ತೆ ಹಾಗೂ ಸಿ.ಸಿ. ಚರ0ಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ
ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸಭಾಂಗಣ ಕಟ್ಟಡ ಉದ್ಘಾಟನೆ
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ರವರು ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ 31 ಪಂಚಾಯಿತಿಗಳ ನೂತನ ಕಾರ್ಯಾಲಯಗಳು ನಿರ್ಮಾಣವಾಗಿದ್ದು, ಮುಂದಿನ ಅಸೆಂಬ್ಲಿ ಚುನಾವಣೆ ಒಳಗೆ ಉಳಿದ ಕಾರ್ಯಾಲಯಗಳು ಸುಸಜ್ಜಿತವಾಗಿ ನಿರ್ಮಾಣವಾಗಬೇಕೆಂದು ಕ್ಷೇತ್ರದ ಶಾಸಕ ಕೆ.ಮಹದೇವ್ ಹಾಗೂ ನನ್ನ ಗುರಿಯಾಗಿದೆ ಎಂದು ತಿಳಿಸಿದರು. ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಸಭಾಂಗಣ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು 14 ನೇ ಹಣಕಾಸು ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಬದಿಗಿಟ್ಟು ನೇರವಾಗಿ ಗ್ರಾಮ ಪಂಚಾಯಿತಿಗೆ ಅನುದಾನವನ್ನು ಮಂಜೂರು ಮಾಡುವುದರೊಂದಿಗೆ ಈ ಯೋಜನೆಯಡಿಯಲ್ಲಿ ಸುಸರ್ಜಿತವಾದ ಹೊಸ ಕಾರ್ಯಾಲಯಗಳು ಪಿರಿಯಾಪಟ್ಟಣದಲ್ಲಿ ಕಾಣಸಿಗುತ್ತವೆ ಎಂದು ತಿಳಿಸಿದರು.
14 ಮತ್ತು 15 ನೇ ಹಣಕಾಸು ಯೋಜನೆಯಡಿಯಲ್ಲಿ ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿ, ಗ್ರಾಮ ಪಂಚಾಯಿತಿಯ ನಿರ್ವಹಣೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಎಲ್ಲವೂ ಕೇಂದ್ರ ಸರ್ಕಾರದಿಂದ ನೇರವಾಗಿ ಬಂದಿರುವ ಅನುದಾನದಿಂದ ಮಾತ್ರ, ಈ ಯೋಜನೆಯಿಂದ ಕಟ್ಟಕಡೆಯ ವ್ಯಕ್ತಿಗೂ ಸಹ ಸರ್ಕಾರದ ಅನುದಾನ ತಲುಪುವಂಥ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.
ತಂಬಾಕು ಅನಧಿಕೃತ ಬೆಳೆಗಾರರು ನೀಡುತ್ತಿದ್ದ 15% ಕಮಿಷನ್ ಅನ್ನು 5%ಗಳಿಗೆ ಇಳಿಸಲಾಗಿದೆ. ರೈತರು ತಂಬಾಕು ಪ್ರತಿ ಕೆಜಿಗೆ ನೀಡುತ್ತಿದ್ದ, ₹ 2 ರೂಗಳ ದಂಡವನ್ನು ಕಡಿಮೆ ಮಾಡಿ ಅದನ್ನು ₹ 1 ರೂ ಗಳಿಗೆ ಇಳಿಸಲಾಗಿದೆ. ಅಲ್ಲದೆ ಅಷ್ಟು ರೈತರಿಗೆ ಲೈಸೆನ್ಸ್ ಕೊಡಿಸುವ ಉದ್ದೇಶ ಹೊಂದಿದ್ದೇನೆ ಮುಂದಿನ ದಿನಗಳಲ್ಲಿಯೂ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸರ್ವೋದಯ ಗ್ರಾಮ ಎಂಬ ಯೋಜನೆಯಡಿಯಲ್ಲಿ ಅತಿ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿರುವುದಲ್ಲದೆ, ಮುಂದಿನ ಅವಧಿಯ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಹ ರೂಪಿಸಲಾಗಿದೆ ,ತಾಲ್ಲೂಕಿನ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಅವರು ಹೆಚ್ಚು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು .
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ ರಾಜೇಗೌಡ, ಆರ್ ಟಿ ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈತ್ರಮ್ಮ ನಟರಾಜ, ಮುಖಂಡರಾದ ಪುಟ್ಟಸ್ವಾಮಿ, ವಸಂತ, ರೇಣುಕಾ, ಸುಂದ್ರಮ್ಮ, ಶ್ರುತಿ, ಶಿಲ್ಪ ಸ್ವಾಮಿ, ಕುಬೇರ್, ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ ತಿಮ್ಮೇಗೌಡ ,ಪಶುವೈದ್ಯಾಧಿಕಾರಿ ಸೋಮಯ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.