ತಾಲ್ಲೂಕಿನ ವಿವಿಧೆಡೆ 97.60 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಾಗೂ 42.10 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ಉದ್ಘಾಟನೆಯನ್ನು ಶಾಸಕ ಕೆ.ಮಹದೇವ್ ಅವರು ನಡೆಸಿದರು. 28/01/2022

ತಾಲ್ಲೂಕಿನ ಸತ್ತೇಗಾಲ ಬಿ ಕಾವಲು, ಪಂಚವಳ್ಳಿ, ಸುರಗಳ್ಳಿ, ಕುಡಕೂರು ಕೊಪ್ಪಲು ಗ್ರಾಮಗಳ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಚಾಲನೆ ಮತ್ತು ಪಂಚವಳ್ಳಿ ಗ್ರಾಮದಲ್ಲಿ ನೀರಿನ ಮೇಲ್ತೊಟ್ಟಿ ನಿರ್ಮಾಣ, ಮುತ್ತೂರು ಸರ್ಕಾರಿ ಪ್ರೌಢಶಾಲೆ ಹಾಗೂ ಹೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ನೂತನ ಶಾಲಾ ಕೊಠಡಿಗಳನ್ನು ಶಾಸಕರು ಉದ್ಘಾಟಿಸಿದರು, ತಾಲ್ಲೂಕಿನ ವಿವಿಧ  ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭ ಕುಂದುಕೊರತೆಗಳ ಮನವಿ ನೀಡದೆ ನೇರವಾಗಿ ನನ್ನ ಗಮನಕ್ಕೆ ತಂದರೆ ಶೀಘ್ರ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ, ಅಭಿವೃದ್ಧಿ ಪರವಾಗಿ ಕೆಲಸ ನಿರ್ವಹಿಸಿದವರನ್ನು ಚುನಾವಣೆ ಸಂದರ್ಭ ಮತದಾರರು ಸ್ಮರಿಸುವ ಕೆಲಸವಾಗಬೇಕು ಆಗ ಮಾತ್ರ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ, ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿದ್ದು ಎಲ್ಲೆಡೆ ಉತ್ತಮ ರಸ್ತೆಗಳ ನಿರ್ಮಾಣವಾಗುತ್ತಿದೆ, ಅಭಿವೃದ್ದಿಯ ವಿಚಾರದಲ್ಲಿ ನಾನು ಎಂದು ಜಾತಿ ಜನಾಂಗ ನೋಡಿದವನಲ್ಲ ಬದಲಾಗಿ ಮೂಲಸೌಕರ್ಯ ವಂಚಿತರು ಯಾರೆ ಬಂದರು ಸಂಬಂಧಿಸಿದ ಗ್ರಾಮದ ಅಭಿವೃದ್ದಿಗೆ ಒತ್ತು ನೀಡುತ್ತೇನೆ ಎಂದರು.

ಸೆಸ್ಕ್ ಅಧಿಕಾರಿಗೆ ತರಾಟೆ: ತಾಲೂಕಿನ ರೈತರಿಗೆ ಕೃಷಿ ಸಂಬಂಧಿತವಾಗಿ ತುರ್ತಾಗಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೇಕು ಎಂದು ಶ್ರಮವಹಿಸಿ 50 ಟ್ರಾನ್ಸ್ಫಾರ್ಮರ್ ತರಿಸಿಕೊಟ್ಟಿದ್ದೇನೆ ಆದರೆ ನೀವುಗಳು ರೈತರಿಂದ ಸಾವಿರಾರು ರೂಪಾಯಿ ಹಣ ಪಡೆದು ಬೇಕಾಬಿಟ್ಟಿಯಾಗಿ ಅಳವಡಿಸುತ್ತಿದ್ದಿರಾ, ರೈತರಿಂದ ಹಣ ಪಡೆಯುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಸೆಸ್ಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು

ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ಟಿ.ಈರಯ್ಯ, ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಅಣ್ಣಯ್ಯಶೆಟ್ರು, ಜಿ.ಪಂ ಎಇಇ ಮಂಜುನಾಥ್, ಗ್ರಾ.ಪಂ ಸದಸ್ಯ ಕಾಳೇಗೌಡ, ಮುಖಂಡರಾದ ಸಂತೋಷ್ , ನಟರಾಜ್  ಪವನ್, ಗುರುರಾಜ್ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಹದೇವ್ ,ಉಪಾಧ್ಯಕ್ಷ ಶಮೀರ್ ಅಹ್ಮದ್, ಮುಖಂಡರಾದ ಅತ್ತರ್ ಮತೀನ್ ವಿದ್ಯಾಶಂಕರ್ ರವಿಗೌಡ ಶಿವೇಗೌಡ ಶಂಕರೇಗೌಡ ಪುಟ್ಟಸ್ವಾಮಿಗೌಡ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top