ಶಾಸಕ ಕೆ ಮಹದೇವ್ ರವರು ವಿವಿದಗ್ರಾಮಗಳ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ 1 ಕೋಟಿ 68 ಲಕ್ಷದ ಚರಂಡಿ ಹಾಗು ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು.
ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳಾದವರ ಕರ್ತವ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಕಿರನಲ್ಲಿ, ಕಂಪಲಾಪುರ ಮುದ್ದನಹಳ್ಳಿ ಗೇಟ್, ಮಾಲಂಗಿ ಗೇಟ್, ಆಲದಕಟ್ಟೆ ಹಾಗು ಹಿಟ್ನೆಹೆಬ್ಬಾಗಿಲು ಗ್ರಾಮಗಳಲ್ಲಿ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲ್ಲೂಕಿನ 400 ಹಳ್ಳಿಗಳಿಗೂ ಆದ್ಯತೆ ಅನುಸಾರ ಮೂಲಭೂತ ಸೌಕರ್ಯ ಒದಗಿಸುವುದು ನನ್ನ ಜವಾಬ್ದಾರಿಯಾಗಿದ್ದು ಶಾಸಕನಾದ 4 ವರ್ಷ ಅವಧಿಯಲ್ಲಿ ವಿರೋಧ ಪಕ್ಷದ ಶಾಸಕನಾದರೂ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಹಿಂದೆ ಆಡಳಿತ ನಡೆಸಿದವರ ನಿರ್ಲಕ್ಷತನದಿಂದಾಗಿ ತಾಲ್ಲೂಕು ಅಭಿವೃದ್ಧಿ ವಂಚಿತವಾಗಿದ್ದು ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಸೋತ ನನ್ನನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದೀರಿ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಹಂತಹಂತವಾಗಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಮುಂದಿನ ಚುನಾವಣೆಯಲ್ಲಿಯೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಅವಕಾಶ ನೀಡಿದರೆ ತಾಲ್ಲೂಕಿನಲ್ಲಿ ಯಾವುದೇ ಕೊರತೆಗಳಿಲ್ಲದ ಹಾಗೆ ಕರ್ತವ್ಯ ನಿರ್ವಹಿಸುವ ಭರವಸೆ ನೀಡಿದರು, ಸರ್ಕಾರಕ್ಕೆ ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ, ಕಿರನಲ್ಲಿ ಗ್ರಾಮಕ್ಕೆ ಮೊದಲ ಬಾರಿಗೆ 1 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಅಶ್ವಿನಿ, ಓಂಕಾರ್, ಮಾಜಿ ಸದಸ್ಯರಾದ ರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟರು, ತಾ.ಪಂ ಮಾಜಿ ಸದಸ್ಯರಾದ
ಟಿ.ಈರಯ್ಯ, ರಘುನಾಥ್, ಮುಖಂಡರಾದ ಕೆ.ಎಂ ಲಕ್ಷ್ಮಣ್, ಶ್ರೀನಾಥ್, ಮುತ್ತುರಾಜ್, ರಾಜೇಗೌಡ, ಉಪತಹಸೀಲ್ದಾರ್ ಶುಭ, ಜಿ.ಪಂ ಎಇಇ ಮಂಜುನಾಥ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಿಡಬ್ಲ್ಯುಡಿ ಎಇ ದಿನೇಶ್, ಪಿಡಿಒ ಪುಷ್ಪಾಬಾಯಿ, ಕಾರ್ಯದರ್ಶಿ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.