
ಪಿರಿಯಾಪಟ್ಟಣ: ಬೆಳೆಹಾನಿ ಸಂದರ್ಭ ರೈತರು ಆತ್ಮಹತ್ಯೆಗೆ ಶರಣಾಗುವ ಕಠಿಣ ನಿರ್ಧಾರ ತೆಗೆದುಕೊಳ್ಳದಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು.
ಪಟ್ಟಣದ ತಾ.ಪಂ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ತಾಲ್ಲೂಕಿನ ವಿವಿಧೆಡೆಯ 16 ರೈತ ಕುಟುಂಬಗಳಿಗೆ ಸರ್ಕಾರ ವತಿಯಿಂದ ನೀಡುವ ಪರಿಹಾರದ ಮಂಜೂರಾತಿ ಪ್ರತಿ ವಿತರಿಸಿ ಅವರು ಮಾತನಾಡಿದರು, ರೈತರ ಆತ್ಮಹತ್ಯೆ ಎಂಬುದು ಅತ್ಯಂತ ದುಃಖಕರ ವಿಷಯವಾಗಿದ್ದು ರೈತರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ , ಬೆಳೆ ವೈಫಲ್ಯ ದರ ಕುಸಿತ ಮತ್ತಿತರ ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಬೇಸರದ ವಿಷಯವಾಗಿದೆ, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಪರಿಹಾರದ ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು, ಕೈಸಾಲ ಎಂಬುದು ಕೆಲವು ಸಂದರ್ಭಗಳಲ್ಲಿ ರೈತರು ಅತ್ಯಂತ ಕೆಟ್ಟ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರಮುಖ ಕಾರಣವಾಗಿದೆ, ತಾಲ್ಲೂಕಿನಲ್ಲಿ ಅಧಿಕಾರಿಗಳ ಪರಿಶ್ರಮದಿಂದ ರೈತರ ಆತ್ಮಹತ್ಯೆಯ ಪರಿಹಾರದ ಹಣ ರೈತರ ಕುಟುಂಬಕ್ಕೆ ಶೀಘ್ರ ದೊರಕಲು ಸಾಧ್ಯವಾಗುತ್ತಿದೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಬಿಇಒ ವೈ.ಕೆ ತಿಮ್ಮೇಗೌಡ, ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ ಮತ್ತಿತರಿದ್ದರು.