
ಐದು ವರ್ಷ ಒಳಪಟ್ಟ ಎಲ್ಲಾ ಮಕ್ಕಳಿಗೂ ಪೋಷಕರು ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಶಾಸಕ ಕೆ ಮಹದೇವ್ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಪಿಡುಗಿನ ತೊಂದರೆಯಿಂದ ಮುಕ್ತವಾಗಬೇಕಿದೆ, ಇಂದಿನಿಂದ ಮಾರ್ಚ್ 2ನೇ ತಾರೀಖಿನವರೆಗೆ ಈ ಅಭಿಯಾನ ನಡೆಯಲಿದ್ದು ಈ ಕಾರ್ಯಕ್ರಮವನ್ನು ಪೋಷಕರು ಯಶಸ್ವಿ ಮಾಡಬೇಕಿದೆ ಹಾಗೂ ಕೋವಿಡ್ ನಿಯಮ ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ತಾಲೂಕು ಆರೋಗ್ಯ ಅಧಿಕಾರಿ ಶರತ್ ಬಾಬು, ಆಡಳಿತಾಧಿಕಾರಿ ದೇವಿಕಾ, ಪುರಸಭೆ ಸದಸ್ಯರಾದ ಮಂಜುಳಾರಾಜ್, ಬಿ.ಹೆಚ್.ಇ.ಒ ಲತಾ, ಎಸ್.ಹೆಚ್.ಐ.ಒ ಪ್ರಕಾಶ್ ಸಿ.ಡಿ.ಪಿ.ಒ ಕುಮಾರ್, ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೋಷಕರು ಹಾಜರಿದ್ದರು.