
ಪಿರಿಯಾಪಟ್ಟಣ: ಶಾಸಕನಾದ ನಂತರ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಟ್ಟು ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ ಆತ್ಮತೃಪ್ತಿ ಇದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ನಡೆದ 2021-22 ನೇ ವರ್ಷದ ನೆರೆ ಸಂತ್ರಸ್ತರ ಪುನರ್ವಸತಿ ಹಾಗೂ 2020-21 ನೇ ಸಾಲಿನ ಡಿ.ದೇವರಾಜ ಅರಸು ವಸತಿ ಯೋಜನೆಯಡಿ ವಿಧವೆಯರ ವಿಶೇಷ ವರ್ಗದಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು, ತಾಲ್ಲೂಕಿನ ಕೊಡಗು ಗಡಿಭಾಗ ಹಾಗೂ ಪಟ್ಟಣವ್ಯಾಪ್ತಿ ಸೇರಿದಂತೆ ಅನೇಕ ಕಡೆ ಮಳೆಯಿಂದ ಮನೆಗಳು ಹಾಳಾಗಿದ್ದು ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಹಣ ಬಿಡುಗಡೆ ಮಾಡಿಸಿ ಮನೆ ನಿರ್ಮಾಣಕ್ಕೆ ಆದೇಶ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ, ಫಲಾನುಭವಿಗಳು ಸರ್ಕಾರದ ಯೋಜನೆಗಳನ್ನು ನಿರ್ಲಕ್ಷಿಸದೆ ಶೀಘ್ರ ಕಾಮಗಾರಿ ಪ್ರಾರಂಭಿಸಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಬೇಕು, ತಾಲ್ಲೂಕಿನಾದ್ಯಂತ ಮನೆ ಇಲ್ಲದೆ ಗುಡಿಸಲು ಹಾಗೂ ಸಂಬಂಧಿಕರ ಮನೆಯಲ್ಲಿ ವಿಧವೆಯರು ಅಂಗವಿಕಲರು ಸೇರಿದಂತೆ ಹಲವರು ವಾಸವಿರುವುದನ್ನು ನನ್ನ ಗಮನಕ್ಕೆ ಅಧಿಕಾರಿಗಳು ತಂದಿದ್ದು ಅವರಿಗೂ ಸಹ ಸರ್ಕಾರದ ವತಿಯಿಂದ ಒಟ್ಟು 1611 ಮನೆಗಳನ್ನು ಮಂಜೂರಾತಿ ಮಾಡಿಸಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ್ದೇನೆ, ತಾಲ್ಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ವಿರೋಧ ಪಕ್ಷದವರು ನಮ್ಮ ವಿರುದ್ಧ ಟೀಕೆ ಟಿಪ್ಪಣಿಗಳನ್ನು ನಿರಂತರವಾಗಿ ಮಾಡುತ್ತಿದ್ದು ಅದಕ್ಕೆ ನಮ್ಮ ಜನ ಬುದ್ಧಿವಂತಿಕೆಯಿಂದ ಅಭಿವೃದ್ಧಿ ಕಾರ್ಯಗಳ ಉತ್ತರಿಸಬೇಕು, ತಾಲ್ಲೂಕಿನ ಶಾಸಕರು ಜನರ ಸಮಸ್ಯೆಯನ್ನು ಹೇಗೆ ಆಲಿಸಿ ಪರಿಹಾರ ಸೂಚಿಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದು ಮಾತನಾಡಬೇಕು, ಈ ಹಿಂದೆ ತಾಲೂಕಿನಲ್ಲಿ ಆಡಳಿತ ಮಾಡಿದವರು ಬಡವರಿಗೆ ದೀನದಲಿತರಿಗೆ ಏಕೆ ಇಂತಹ ಕಾರ್ಯಕ್ರಮವನ್ನು ಮಾಡಲಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಇರಬೇಕು ಇದನ್ನು ಮನಗಂಡು ಮುಂದಿನ ದಿನಗಳಲ್ಲಿಯು ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರ ತರಬೇಕು ಅದಕ್ಕೆ ನಿಮ್ಮ ಸಹಕಾರ ಇರಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಹಾಗು ತಾ.ಪಂ ಮಾಜಿ ಸದಸ್ಯರಾದ ಟಿ .ಈರಯ್ಯ, ಮಾತನಾಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ , ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಜವರಪ್ಪ , ಎ.ಟಿ ರಂಗಸ್ವಾಮಿ , ಸೋಮಶೇಖರ್ ,ಪುರಸಭಾ ಸದಸ್ಯ ಪಿ.ಸಿ ಕೃಷ್ಣ ,
ಕೆ.ಮಹೇಶ್, ಚನ್ನಕಲ್ ಕಾವಲು ಗ್ರಾ.ಪಂ ಉಪಾಧ್ಯಕ್ಷ ಧನರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ನಿರ್ದೇಶಕ ದೊರೆಕೆರೆ ನಾಗೇಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹರೀಶ್, ಜೆಡಿಎಸ್ ತಾಲ್ಲೂಕು ಕಾರ್ಯದರ್ಶಿ ಬಿ.ವಿ ಗಿರೀಶ್, ಯುವ ಘಟಕ ಅಧ್ಯಕ್ಷ ನವೀನ್ ಕುಮಾರ್ ಮತ್ತಿತರಿದ್ದರು.