
ಪಟ್ಟಣದ ಪುರಸಭೆ ಕಚೇರಿಯಲ್ಲಿ ನಗರದ ಎಲ್ಲಾ 23 ವಾರ್ಡ್ ಗಳಲ್ಲಿ ಬರುವ ಆಸ್ತಿಗಳನ್ನು ಇ- ತಂತ್ರಾಂಶದಲ್ಲಿ ದಾಖಲಿಸಿ ನಮೂನೆ 3ನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಚಾಲನೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ಆಸ್ತಿ ತೆರಿಗೆ ನೀರಿನ ಕರ ವ್ಯಾಪಾರ ಪರವಾನಗಿ ಕಟ್ಟಡ ಪರವಾನಗಿ ಹಾಗೂ ಇತರೆ ಸೇವೆಗಳ ಶುಲ್ಕವನ್ನು ಆನ್ಲೈನ್ ಕ್ಯೂಆರ್ ಕೋಡ್ ಹಾಗೂ ಸ್ವೈಪ್ ಮಿಷಿನ್ ಮುಖಾಂತರ ಪುರಸಭೆಯಲ್ಲಿ ಪಾವತಿಸುವ ಯೋಜನೆಗೆ ಚಾಲನೆ ಮತ್ತು ನಗರದ ಸಂಚಾರಿ ವ್ಯವಸ್ಥೆ ಸುಗಮವಾಗಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಟ್ರಾಫಿಕ್ ಸಿಗ್ನಲ್ ಬೋರ್ಡ್ ಅಳವಡಿಸುವ ಕಾರ್ಯಕ್ರಮಕ್ಕೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪಿರಿಯಾಪಟ್ಟಣ ನಗರದ ಶ್ರೀ ಕನ್ನಂಬಾಡಿ ಅಮ್ಮ ಹಾಗೂ ಮಸಣಿಕಮ್ಮ ದೇವಸ್ಥಾನ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಗರದ ಎಲ್ಲ ಸಮಾಜದ ಮುಖಂಡರು ಹಾಗೂ ವರ್ತಕರ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಾತ್ರೆ ಅಂಗವಾಗಿ ಸ್ವಚ್ಛತೆ ಬಗ್ಗೆ ಗಮನಹರಿಸಿ ಸರ್ಕಾರಿ ಇಲಾಖೆ ಕಚೇರಿ ಅಂಗಡಿಗಳಿಗೆ ದೀಪಾಲಂಕಾರ ಮಾಡಿಸಲು ಪುರಸಭೆ ಅಧಿಕಾರಿಗಳು ಮನವರಿಕೆ ಮಾಡಬೇಕು ಉತ್ತಮ ದೀಪಾಲಂಕಾರ ಮಾಡಿದವರಿಗೆ ಪ್ರಥಮ ಬಹುಮಾನವಾಗಿ ಪುರಸಭೆಯಿಂದ ಒಂದು ಲಕ್ಷ ರೂ, ಶಾಸಕರಿಂದ ದ್ವಿತೀಯ ಬಹುಮಾನವಾಗಿ 50 ಸಾವಿರ ರೂ, ತೃತೀಯ ಬಹುಮಾನ 25 ಸಾವಿರ ರೂಗಳನ್ನು ನೀಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಎ. ಟಿ ಪ್ರಸನ್ನ ಮಾತನಾಡಿ ಆಸ್ತಿಗಳ ದಾಖಲೆ ನೀರಿನ ತೆರಿಗೆ ವ್ಯಾಪಾರ ಪರವಾನಗಿ ಕಟ್ಟಡ ಪರವಾನಗಿ ಸೇರಿದಂತೆ ಇತರೆ ಶುಲ್ಕಗಳನ್ನು ಆನ್ಲೈನ್ ಮೂಲಕ ಪಾವತಿಸಲು ಪುರಸಭೆ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಚಂದ್ರಮೌಳಿ ವೃತ್ತ ನಿರೀಕ್ಷಕ ಜಗದೀಶ್, ಪ್ರಕಾಶ್, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಉಪಾಧ್ಯಕ್ಷೆ ನಾಗರತ್ನ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್ ಬಿಸಿ ಕೃಷ್ಣ ಪುಷ್ಪಲತಾ ಹರ್ಷದ್ ರತ್ನಮ್ಮ ಮಂಜುಳಾ ನಿರಂಜನ್ ಪ್ರಕಾಶ್ ವೈಶಾಲಿ ಆದರ್ಶ್ ಪ್ರದೀಪ್ ಕುಮಾರ್ ಮಹದೇವ್ ರೇವಣ್ಣ ಮಹದೇವಸ್ವಾಮಿ ಶರಣಪ್ಪ ಹಾಗೂ ಎಲ್ಲ ಸಮಾಜದ ಮುಖಂಡರು ಹಾಗೂ ವರ್ತಕರು ಹಾಜರಿದ್ದರು