ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು, ಕೆಂಪೇಗೌಡರು ದೂರದೃಷ್ಟಿ ಉಳ್ಳ ವ್ಯಕ್ತಿಯಾಗಿದ್ದು ಎಲ್ಲಾ ಸಮುದಾಯಗಳು ಸಮೃದ್ದಿಯಿಂದ ಬದುಕುವಂತೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿಸಿದ್ಧಾರೆ ಇಂತಹ ವ್ಯಕ್ತಿಗಳ ಆದರ್ಶವು ಅನುಕರಣೀಯವಾಗಿದ್ದು ಒಂದು ನಗರಕ್ಕೆ ಸೀಮಿತವಾಗದೆ ಇಂದು ಸಮುದಾಯದ ಆದರ್ಶವ್ಯಕ್ತಿಯಾಗಿ ಅವರನ್ನು ಕಾಣಲಾಗುತ್ತಿದೆ ಇಂತಹ ಆಡಳಿತಕಾರರ ತತ್ವ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಕೇಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಾಣ ಮಾಡುವಾಗ ಅಗತ್ಯಕ್ಕೆ ತಕ್ಕಂತೆ ಪೇಟೆ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು ಅವರೊಬ್ಬ ಪರಿಸರ ಪ್ರೇಮಿ ಮತ್ತು ದಕ್ಷ ಆಡಳಿತಗಾರಾಗಿದ್ದರು ಎಂಬುದನ್ನು ಸಾಬೀತುಪಡಿಸುತ್ತವೆ, ಒಂದು ನಗರ ನಿರ್ಮಾಣವಾಗಿ ಆಧೂನೀಕರಣಗೊಂಡು ಅನೇಕ ವರ್ಷಗಳಾದರು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಉದ್ಯಾನ ನಗರಿ ಎಂಬ ಹೆಸರಿಗೆ ಪಾತ್ರವಾಗಿದೆ ಎಂದರೆ ಅದು ಕೆಂಪೇಗೌಡರ ಕೊಡುಗೆಯಾಗಿದೆ, ಇಂತಹ ಮಹನೀಯರ ಜಯಂತಿ ಆಚರಣೆ ಮಾಡುವುದರೊಂದಿಗೆ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವ ಮೂಲಕ ಆಚರಣೆಗಳಿಗೆ ಅರ್ಥ ನೀಡಬೇಕು ಎಂದು ತಿಳಿಸಿದರು.ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಪ್ರಕಾಶ್ ಸಿಂಗ್, ನಳಿನಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಜಲೇಂದ್ರ, ಎಡಿಎಲ್‌ಆರ್ ಚಿಕ್ಕಣ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ ಪ್ರಕಾಶ್, ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜು, ಯುವ ವೇದಿಕೆ ಅಧ್ಯಕ್ಷ ದಿನೇಶ್ ಗೌಡ, ತಾ.ಪಂ.ಸದಸ್ಯರಾದ ಟಿ.ರಘುನಾಥ್, ಮಲ್ಲಿಕಾರ್ಜುನ್, ಮುಖಂಡರಾದ ಗಗನ್, ಟಿ.ರಾಜು, ಅಶೋಕ್, ಉದಯ್ ಮತ್ತಿತರಿದ್ದರು.