ಪಿರಿಯಾಪಟ್ಟಣ: ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಪಟ್ಟಣದ ಶುಚಿತ್ವ ಕಾಪಾಡುವಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಅಮೃತ ನಿರ್ಮಲ ನಗರ ಯೋಜನೆಯಡಿ 42 ಲಕ್ಷ ರೂ ವೆಚ್ಚದ ಕಾಂಪ್ಯಾಕ್ಟರ್ ವಾಹನ ಮತ್ತು15 ನೇ  ಹಣಕಾಸಿನಲ್ಲಿ 9 ಲಕ್ಷ ರೂ ವೆಚ್ಚದ ಎರಡು ಟಿಪ್ಪರ್ ಲೋಕಾರ್ಪಣೆ  ಹಾಗೂ ಅಂಗವಿಕಲರ ಕಲ್ಯಾಣ ಯೋಜನೆಯಲ್ಲಿ 4.80 ಲಕ್ಷ ವೆಚ್ಚದ ಮೂರು ಚಕ್ರದ ವಾಹನವನ್ನು ಪಲಾನುಭವಿಗಳಿಗೆ  ಹಸ್ತಾಂತರಿಸಿ ಅವರು ಮಾತನಾಡಿದರು, ಸ್ವಚ್ಛತೆ ಕಾಪಾಡಿಕೊಂಡರೆ ಕಾಯಿಲೆಗಳಿಂದ ದೂರವಿದ್ದು ಉತ್ತಮ ಆರೋಗ್ಯಕರ ಜೀವನ ನಡೆಸಬಹುದು, ಮನೆಗಳಲ್ಲಿ ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಕಸ ವಿಲೇವಾರಿ ವಾಹನ ಬಂದಾಗ ನೀಡಿದರೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬಹುದು, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಪುರಸಭೆ ಸದಸ್ಯರು ಪಕ್ಷಾತೀತವಾಗಿ ಸಹಕರಿಸಿ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದರೆ ಬಗೆಹರಿಸಲು ಕೈಲಾದ ಸಹಾಯ ಮಾಡುವೆ, ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಮಾಡಬೇಕು ಮಿಕ್ಕ ಸಂದರ್ಭ ಎಲ್ಲರೂ ಅಭಿವೃದ್ಧಿಗೆ ಒತ್ತು ನೀಡಬೇಕು, ತಾನು ಪಟ್ಟಣದಲ್ಲಿ ವಾಸಿಸುವುದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದ್ದು ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷನಾದ ಸಂದರ್ಭದಿಂದಲೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿ ಜನಪರ ಆಡಳಿತ ನಡೆಸಿದ್ದು ಮುಂದೆಯೂ ಸಹ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ನಾಗರತ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಮಂಜುನಾಥ್ ಸಿಂಗ್, ನಿರಂಜನ್, ಮಂಜುನಾಥ್, ಪ್ರಕಾಶ್ ಸಿಂಗ್, ರವಿ, ಶ್ಯಾಮ್, ಶ್ವೇತಾ, ರೇವತಿ, ಭಾರತಿ, ರೂಹಿಲ್ಲಾ ಖಾನಂ, ನೂರ್ ಜಹಾನ್, ರತ್ನಮ್ಮ, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಮತ್ತು ಸಿಬ್ಬಂದಿ ಇದ್ದರು 

Leave a Comment

Your email address will not be published. Required fields are marked *

error: Content is protected !!
Scroll to Top