ತಾಲ್ಲೂಕಿನ ದೊಡ್ಡಹೊನ್ನೂರು ಕಾವಲ್, ಮರಡಿಯೂರು ಹಾಗೂ ಐಚನಹಳ್ಳಿ ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ತಲಾ 20 ಲಕ್ಷ ವೆಚ್ಚದ ಒಟ್ಟು 60 ಲಕ್ಷದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಇದ್ದ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ತಾಲ್ಲೂಕಿನಲ್ಲಿ ಯಾವುದೇ ಕಾಮಗಾರಿಗಳಿಗೆ ಚಾಲನೆ ನೀಡಿರಲಿಲ್ಲ, ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದು ಹಂತಹಂತವಾಗಿ ತಾಲ್ಲೂಕಿನಾದ್ಯಂತ ಹಿಂದುಳಿದ ಹಳ್ಳಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು, ಮೊದಲ ಬಾರಿಗೆ ಶಾಸಕನಾದರೂ ಅಧಿಕಾರವಧಿಯಲ್ಲಿ ಕೋವಿಡ್ ನೆರೆ ಪ್ರವಾಹದಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ವಿಪಕ್ಷ ಶಾಸಕನಾಗಿ ತಾಲ್ಲೂಕಿನ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಿಸಿದ ಇಲಾಖೆ ಸಚಿವರು ಸಂಸದರು ಹಾಗೂ ಅಧಿಕಾರಿಗಳ ಬಳಿ ಮನವಿ ಮಾಡಿ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.ಈ ಸಂದರ್ಭ ಹಾರಂಗಿ ಪುನರ್ವಸತಿ ಉಪವಿಭಾಗ ಕುಶಾಲನಗರ ಎಇಇ ಎನ್.ಕೆ ನವೀನ್ ಕುಮಾರ್, ಎಇ ಗಳಾದ ಶಿವಕುಮಾರ್, ಗೌತಮ್, ಆರ್ ಡಬ್ಲ್ಯುಎಸ್ ಎಇ ಇದ್ರಿಸ್, ಹಾರನಹಳ್ಳಿ ಕಂದಾಯಾಧಿಕಾರಿ ಪ್ರದೀಪ್, ಬೈಲಕುಪ್ಪೆ ತಾ.ಪಂ ಮಾಜಿ ಸದಸ್ಯರಾದ ಮಾನು ಇನಾಯತ್, ಸೋಮಶೇಖರ್, ಕಣಗಾಲು ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಕುಮಾರ್ ಶೆಟ್ಟಿ, ಸದಸ್ಯೆ ರೇಣುಕ, ಮಾಜಿ ಅಧ್ಯಕ್ಷರಾದ ಕೆ.ಮಹದೇವ್, ಹನುಮಂತು, ಪಿಡಿಒ ಗಣೇಶ್, ಆವರ್ತಿ ಗ್ರಾ.ಪಂ ಸದಸ್ಯರಾದ ಶಿವಕುಮಾರ್, ಡಿ.ಎಂ ಮೋಹನ್ ಕುಮಾರ್, ಮಂಜುನಾಥ್, ಅರ್ಷತ್, ಪಿಡಿಒ ಅಬಿ ಮಹಮ್ಮದ್, ಕೊಪ್ಪ ಗ್ರಾ.ಪಂ ಸದಸ್ಯ ಹರೀಶ್, ಪಿಡಿಒ ಬೋರೇಗೌಡ, ಗ್ರಾಮ ಲೆಕ್ಕಿಗರಾದ ನವೀನ್ ರಾವ್, ತೇಜಸ್ವಿ, ಸುನೀಲ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.
