ಪಿರಿಯಾಪಟ್ಟಣ: ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಚ್.ಕೆ ರಾಮು ಅವರಿಗೆ ತಾಲ್ಲೂಕಿನಿಂದ ಅತಿಹೆಚ್ಚು ಮತಗಳು ಚಲಾವಣೆಯಾಗುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಕರ್ತವ್ಯ ನಿರ್ವಹಿಸಿ – ಶಾಸಕ ಕೆ.ಮಹದೇವ್

ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ನಡೆದ ದಕ್ಷಿಣ ಪದವೀಧರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ಜೆಡಿಎಸ್ ಕಾರ್ಯಕರ್ತರು ಪ್ರತಿಯೊಬ್ಬ ಪದವೀಧರ ಮತದಾರರ ಮನೆಗೆ ತೆರಳಿ ಮತಯಾಚನೆ ಮಾಡುವುದರೊಂದಿಗೆ ಪಕ್ಷದ ಅಭಿವೃದ್ಧಿ ಕಾರ್ಯಗಳ ಮನವರಿಕೆ ಮಾಡಬೇಕು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಬಹಳ ಪ್ರಮುಖ ಘಟ್ಟವಾಗಿದ್ದು ಕಾರ್ಯಕರ್ತರು ಪ್ರತಿ ಹೋಬಳಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಪದವೀಧರ ಮತದಾರರನ್ನು ಭೇಟಿ ಮಾಡಿ  ಸಂಘಟನೆಗೆ ಮುಂದಾಗಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ ರಾಮು ಅವರ ಗೆಲುವಿಗೆ ಸಹಕಾರ ನೀಡಬೇಕು ಎಂದರು.  ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಅವರು ಮಾತನಾಡಿ ಜೆಡಿಎಸ್ ಸೈದ್ಧಾಂತಿಕ ಹಿನ್ನೆಲೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ, ರಾಜ್ಯದ ಅಭಿವೃದ್ಧಿ ಮತ್ತು ರೈತರ ಹಿತದೃಷ್ಟಿಯಿಂದ ಮತ್ತೆ ಕುಮಾರಸ್ವಾಮಿ ಯವರನ್ನು ಮುಖ್ಯಮಂತ್ರಿ ಮಾಡುವುದರೊಂದಿಗೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಈ ಹಿಂದಿನ ದಕ್ಷಿಣ ಪದವಿಧರರ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೆ ಜಯಗಳಿಸಿದ್ಧು ಈ ಬಾರಿಯೂ ಮತದಾರರು ಉತ್ತಮ ರೀತಿಯಲ್ಲಿ ಚಿಂತನೆ ನಡೆಸಿ ದೇವೇಗೌಡರವರ ಸಾಧನೆ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಭರವಸೆಯ ಆಡಳಿತದ ಬಗ್ಗೆ ಪ್ರತಿ ಪದವೀಧರರು ಮನವರಿಕೆ ಮಾಡಿಕೊಂಡು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.  ಈ ಸಂದರ್ಭ ಚುನಾವಣಾ ಉಸ್ತುವಾರಿ ಎಂ.ಟಿ ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಬೃಂದಾ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ನಂದಿನಿ ರಮೇಶ್, ಸಂಘಟನಾ ಕಾರ್ಯದರ್ಶಿ ಜ್ಯೋತಿ, ಉಪಾಧ್ಯಕ್ಷೆ ಸುಜಾತಾ, ಕಾರ್ಯಾಧ್ಯಕ್ಷೆ ಆಶಾ, ತಾಲ್ಲೂಕು ಅಧ್ಯಕ್ಷೆ ಪ್ರೀತಿ ಅರಸ್, ಎಸ್ಸಿಎಸ್ಟಿ ಘಟಕ ಅಧ್ಯಕ್ಷ ಹೇಮಂತ್‌ಕುಮಾರ್, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ,  ಸದಸ್ಯ ಪ್ರಕಾಶ್ ಸಿಂಗ್, ತಾ.ಪಂ ಮಾಜಿ ಸದಸ್ಯರಾದ ಟಿ.ಈರಯ್ಯ, ಎ.ಟಿ ರಂಗಸ್ವಾಮಿ, ಮೋಹನ್ ರಾಜ್, ಯುವ ಘಟಕ ಅಧ್ಯಕ್ಷ ನವೀನ್ ಆಲನಹಳ್ಳಿ, ಮುಖಂಡರಾದ ಚಂದ್ರಶೇಖರಯ್ಯ, ಟಿ.ರಾಜು, ಯತಿರಾಜೇಗೌಡ, ರಘುನಾಥ್, ವಿದ್ಯಾಶಂಕರ್, ಬಿ.ವಿ ಗಿರೀಶ್, ರವಿಕುಮಾರ್  ಹಾಗು ಜೆಡಿಎಸ್ ತಾಲ್ಲೂಕು ಘಟಕದ ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top