ನಾಡಿನ ಜನತೆಯ ಕ್ಷೇಮಾಭಿವೃದ್ಧಿಗೆ  ಪ್ರಕೃತಿಯ ವರದಾನ ಕೂಡ  ಕಾರಣವಾಗಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.

ತಾಲೂಕಿನ ಕಿರನಹಳ್ಳಿ ಗ್ರಾಮದ ಸಮೀಪವಿರುವ ಚಿಕ್ಕ ಕೆರೆ ಮತ್ತು ದೊಡ್ಡ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು 13 ವರ್ಷಗಳಿಂದ ನೀರನ್ನು ಕಾಣದೆ ಬತ್ತಿ ಹೋಗಿದ್ದ ಕೆರೆಗಳು ಇಂದು ಮಳೆಯ ಪರಿಣಾಮ ತುಂಬಿ ಹರಿಯುತ್ತಿದೆ. ಇದರಿಂದಾಗಿ ಸಮೀಪವಿರುವ ಗ್ರಾಮಗಳಿಗೆ ಅಂತರ್ಜಲದ ಹೆಚ್ಚುವಿಕೆಯ ಪರಿಣಾಮ ಕುಡಿಯುವ ನೀರಿನ ತೊಂದರೆ ತಪ್ಪಿದೆ ಅಲ್ಲದೆ  ವ್ಯವಸಾಯಕ್ಕೂ ಕೂಡ ನೀರಿನ ಅಭಾವವನ್ನು ಕೆರೆಗಳು ನೀಗಿಸಿದೆ. ಕಿರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 650 ಎಕರೆಗಳಿಗೆ ಈ ಕೆರೆಯ ನೀರು ಪೂರೈಕೆಯಾಗುತ್ತಿದ್ದು ಇಂದು ತುಂಬಿ ಹರಿಯುವುದರ ಮೂಲಕ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿ ತಾಲೂಕಿನ ಜನತೆಗೆ ಒಳಿತನ್ನು ಉಂಟು ಮಾಡಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಾಜೇಗೌಡ, ಶ್ರೀನಾಥ್, ಸೋಮು, ನಿಸರಹ್ಮದ್,  ಅಣ್ಣಯ್ಯ, ದೇವದಾಸ್, ಅಶ್ವಿನಿ ಪುಟ್ಟಸ್ವಾಮಿ, ಉಮೇಶ್, ಸ್ವಾಮಿ ನಾಯಕ್ ಸೇರಿದೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top