
ಪಿರಿಯಾಪಟ್ಟಣ: ಪಟ್ಟಣದ ಶಕ್ತಿ ದೇವತೆ ಶ್ರೀ ಮಸಣಿಕಮ್ಮನವರ ದೇವಾಲಯದಲ್ಲಿ ಶಾಸಕ ಕೆ.ಮಹದೇವ್ ಹಾಗೂ ಕುಟುಂಬದವರು ಆಷಾಢ ಮಾಸದ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನ ಅಭಿವೃದ್ಧಿ ಹಾಗೂ ಜನತೆಗೆ ಒಳಿತಾಗುವ ನಿಟ್ಟಿನಲ್ಲಿ ಶಕ್ತಿ ದೇವತೆ ಶ್ರೀ ಮಸಣೀಕಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದು ಪ್ರತಿಯೊಬ್ಬರ ಸಂಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದರು.
ಶಾಸಕರ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ಕೊರೋನಾ ಸಂಕಷ್ಟದಿಂದ ಜನರ ಜೀವನ ಹದಗೆಟ್ಟಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಿ ಅಭಿವೃದ್ಧಿ ಹೊಂದಲಿ ಎಂದು ತಾಲ್ಲೂಕಿನ ಜನತೆಯ ಪರವಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಇದೆ ವೇಳೆ ಶ್ರೀ ಮಸಣಿಕಮ್ಮನವರ ದೇವಾಲಯಕ್ಕೆ ಆಗಮಿಸಿದ ಭಗ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭ ಶಾಸಕರ ಪತ್ನಿ ಸುಭದ್ರಮ್ಮ, ಸೊಸೆ ಅನಿತಾ, ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಸದಸ್ಯರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮುಖಂಡರಾದ ಕೆ.ರಮೇಶ್, ಹರೀಶ್, ಎಸ್. ರಾಮು, ಗಗನ್, ಲೋಕೇಶ್, ಲಕ್ಷ್ಮಣ್ ಪಟೇಲ್, ರಘುನಾಥ್, ಬಿ.ವಿ ಗಿರೀಶ್, ಸುನಿತಾ ಮಂಜುನಾಥ್, ಪ್ರೀತಿ ಅರಸ್, ಕೆಂಪಣ್ಣ ಹಾಗು ಜೆಡಿಎಸ್ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಕಾರ್ಯಕರ್ತರು ಇದ್ದರು.