
ಪಿರಿಯಾಪಟ್ಟಣ ತಾಲ್ಲೂಕಿನ ಸುರಗಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ನೂತನ ಪಡಿತರ ಉಪ ಕೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜಕೀಯದಲ್ಲಿ ಇದ್ದವರಿಗೆ ಜನಸೇವೆ ಮಾಡುವ ಗುರಿ ಇರಬೇಕು ಅದನ್ನು ಬಿಟ್ಟು ರಾಜಕೀಯವಾಗಿ ದ್ವೇಷ ಸಾಧಿಸಬಾರದು,ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು ,ಅಂಥವರಿಗೆ ತಾಲ್ಲೂಕಿನ ಜನತೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಿ , ದೀನ ದಲಿತರನ್ನು ನಿರ್ಲಕ್ಷ್ಯ ಮಾಡದೆ ತಾಲೂಕಿನ ಎಲ್ಲ ಸಮಾಜದ ಅಭಿವೃದ್ಧಿಗೆ ಪಣತೊಟ್ಟಿರುವೆ. ಹಾಗಾಗಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿರುವ ನನಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದರು.
ತಾಲ್ಲೂಕಿನಲ್ಲಿ ಹಲವಾರು ಸಹಕಾರ ಸಂಘಗಳು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಮನೆಗಳಲ್ಲಿ ಹಾಲು ಶೇಖರಣೆ ಮಾಡುತ್ತಿದ್ದು ,ಮೈಮುಲ್ ಅಧ್ಯಕ್ಷ ರೊಡನೆ ಚರ್ಚಿಸಿ ಸದ್ಯದಲ್ಲೇ ಎಲ್ಲ ಸಂಘಗಳಿಗೂ ಸ್ವಂತ ಕಟ್ಟಡವನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ನನ್ನ ಪುತ್ರ ಮೈಮುಲ್ ಅಧ್ಯಕ್ಷ ಪಿ ಎಂ ಪ್ರಸನ್ನ ಸಹಕಾರ ರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ 40 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು , ಆದರೆ ಈಗ 2ಲಕ್ಷ ಲೀಟರ್ ನಷ್ಟು ಹಾಲು ಶೇಖರಣೆಯಾಗುತ್ತಿದ್ದು ಎಷ್ಟೋ ಬಡ ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ಜೀವನ ಸಾಗಿಸು ತ್ತಿದ್ದಾರೆ.ನಾನು ಮತ್ತು ನನ್ನ ಪುತ್ರ ರಾಜಕೀಯವಾಗಿ ತಾಲ್ಲೂಕಿನಲ್ಲಿ ಇರುವವರೆಗೂ ತಾಲ್ಲೂಕಿನ ಅಭಿವೃದ್ಧಿಗಾಗಿ ಜೀವನವನ್ನು ಮುಡಿಪಾಗಿಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಹಲಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಹಾದೇವ್, ಉಪಾಧ್ಯಕ್ಷ ಶಫೀರ್ ಅಹ್ಮದ್ ,ಸುರಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ,ಕಾರ್ಯದರ್ಶಿ ಪುಟ್ಟರಾಜು ,ವಿಸ್ತರಣಾಧಿಕಾರಿ ಸತೀಶ್ ,ಮುಖಂಡರಾದ ವಿದ್ಯಾಶಂಕರ್, ರವಿಗೌಡ, ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.