
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 67.20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲ್ಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ವಿಪಕ್ಷ ಶಾಸಕನಾಗಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರಲಾಗುತ್ತಿದ್ದು ಹಂತ ಹಂತವಾಗಿ ತಾಲೂಕಿನ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಸ್ಥಳೀಯ ಜನಪ್ರತಿನಿಧಿಗಳು ಸಹ ಸ್ಥಳೀಯ ಸಂಸ್ಥೆಯ ಅನುದಾನ ಪಡೆದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಈ ವೇಳೆ ಮಾಗಳಿ ಗ್ರಾಮದಲ್ಲಿ 9 ಲಕ್ಷ ವೆಚ್ಚದ ಗ್ರಾಮಪರಿಮಿತಿ ಮತ್ತು ಜಮೀನಿಗೆ ತೆರಳುವ ರಸ್ತೆ, ಕಿರಂಗೂರು ಗ್ರಾಮದಲ್ಲಿ 14.70 ಲಕ್ಷ ವೆಚ್ಚದಲ್ಲಿ ಸಿದ್ಧಾಪುರ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ, ಐಲಾಪುರ ಗ್ರಾಮದಲ್ಲಿ 18.50 ಲಕ್ಷ ವೆಚ್ಚದಲ್ಲಿ ಬೆಮ್ಮತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪೂನಾಡಹಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ, ಜಿ.ಬಸವನಹಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಜಿ.ಪಂ ಎಇಇ ಮಲ್ಲಿಕಾರ್ಜುನ್, ಚೆಸ್ಕಾಂ ಎಇಇ ಸುನೀಲ್, ಎಸಿಡಿಪಿಒ ಅಶೋಕ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ತಾ.ಪಂ ಮಾಜಿ ಸದಸ್ಯರಾದ ಎಸ್.ರಾಮು, ಎ.ಟಿ ರಂಗಸ್ವಾಮಿ, ರಘುನಾಥ್, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಕುಮಾರ್, ಸದಸ್ಯರಾದ ನಾರಾಯಣ್, ಪುಟ್ಟರಾಜ್, ಪ್ರಕಾಶ್, ಮುಖಂಡರಾದ ಜಲೇಂದ್ರ, ಚಂದ್ರಶೇಖರಯ್ಯ, ಅಶೋಕ್, ಕೆಂಪಣ್ಣ, ಮಹದೇವ್, ಎಂ.ಜೆ ಸ್ವಾಮಿ, ಯತಿರಾಜೇಗೌಡ, ನಾಗರಾಜ್, ಶಿವಪ್ಪ, ಶೆಟ್ಟಪ್ಪ, ವೆಂಕಟೇಶ್, ಸಚ್ಚಿದಾನಂದ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರು ಇದ್ದರು.