
ಪಿರಿಯಾಪಟ್ಟಣ: ಗುಣಮಟ್ಟದ ಕಾಮಗಾರಿ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ಬೈಲಕುಪ್ಪೆ ಲಕ್ಷ್ಮಿಪುರ ಹಾಗೂ ಬೆಟಿಯನ್ ಮೂರನೇ ಕ್ಯಾಂಪ್ ರಸ್ತೆ ಅಭಿವೃದ್ಧಿಯ 1.58 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ರಸ್ತೆ ಸಂಪೂರ್ಣ ಹದಗೆಟ್ಟ ಬಗ್ಗೆ ಟಿಬೆಟಿಯನ್
ಸೆಟಲ್ ಮೆಂಟ್ ಅಧಿಕಾರಿಗಳು ಹಾಗೂ ಬೈಲುಕುಪ್ಪೆ ಲಕ್ಷ್ಮಿಪುರ ಗ್ರಾಮಸ್ಥರು ಅನೇಕ ಬಾರಿ ನಮಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದ್ದರಿಂದ ಆದ್ಯತೆಗನುಗುಣವಾಗಿ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗುಣಮಟ್ಟದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ ಕಾಮಗಾರಿ ನಡೆಯುವ ವೇಳೆ ನಿಗಾ ವಹಿಸಬೇಕು, ಶಾಸಕನಾದ ನಂತರ ತಾಲ್ಲೂಕಿನಾದ್ಯಂತ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಅಭಿವೃದ್ಧಿಗೆ ಒತ್ತು ನೀಡಿ ಹಂತ ಹಂತವಾಗಿ ಆದ್ಯತೆಗನುಗುಣವಾಗಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಜೆಡಿಎಸ್ ತಾಲುಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾ.ಪಂ ಮಾಜಿ ಸದಸ್ಯರಾದ ಮಾನು, ಎ.ಟಿ ರಂಗಸ್ವಾಮಿ, ಎಸ್.ರಾಮು, ಗ್ರಾ.ಪಂ ಸದಸ್ಯರಾದ ನಿಸಾರ್ ಅಹಮದ್, ದಾವೂದ್, ಚಂದು, ರಘು, ಮಾಜಿ ಸದಸ್ಯ ದಿನೇಶ್, ಪಿಡಿಒ ಬೋರೇಗೌಡ, ಮಂಜು, ಮಂಚದೇವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಟಿಬೆಟಿಯನ್
ಸೆಟಲ್ಮೆಂಟ್ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.