
ತಾಲ್ಲೂಕಿನ ವಿವಿಧೆಡೆ 80 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬೂದಿತಿಟ್ಟು ಗ್ರಾಮದಲ್ಲಿ ಅವರು ಮಾತನಾಡಿದರು, ಕಳೆದೆರೆಡು ಚುನಾವಣೆಯಲ್ಲಿ ವಿರೋಧಿಗಳ ಅಪಪ್ರಚಾರದಿಂದ ಸೋಲುಂಟಾಯಿತು ಆದರೆ ನಾನು ಬೇರೆಯವರ ಬಗ್ಗೆ ಅಪಪ್ರಚಾರ ಹಾಗೂ ಶಾಂತಿ ಕದಡುವ ಸಂದೇಶ ನೀಡಿ ಮತ ಪಡೆಯುವ ಹವ್ಯಾಸ ಹೊಂದಿಲ್ಲ, ಕೋವಿಡ್ ಹಾಗೂ ನೆರೆ ಪ್ರವಾಹದ ಸಂಕಷ್ಟದ ಸಮಯದಲ್ಲಿಯು ಶಾಸಕನಾಗಿ ನನ್ನ ಜವಾಬ್ದಾರಿ ಮರೆಯದೆ ವಿರೋಧ ಪಕ್ಷದಲ್ಲಿದ್ದರು ಸಚಿವರು ಹಾಗೂ ಇಲಾಖೆ ಮೇಲಧಿಕಾರಿಗಳನ್ನು ಕಾಡಿ ಬೇಡಿ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಬಾಕಿ ಇರುವ ಕೆಲಸಗಳ ಅಭಿವೃದ್ಧಿಗಾಗಿ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ತಾ.ಪಂ ಮಾಜಿ ಸದಸ್ಯ ಎಸ್.ರಾಮು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿದರು, ಈ ವೇಳೆ ತಲಾ 20 ಲಕ್ಷ ವೆಚ್ಚದ ಬೂದಿತಿಟ್ಟು-ಕೆಎಸ್ ಕೆ ನಗರ ಹಾಗೂ ಬೂದಿತಿಟ್ಟು- ಲಕ್ಷ್ಮೀಪುರ ರಸ್ತೆ ಮತ್ತು 40 ಲಕ್ಷ ವೆಚ್ಚದ ನಾರಳಾಪುರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಲಕ್ಷ್ಮಣ್ ಪಟೇಲ್, ಮಾಜಿ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸದಸ್ಯೆ ಶಾರದಾ, ಮುಖಂಡರಾದ ಮಹದೇಶ್ವರ, ರಾಮಚಂದ್ರ, ನಿಂಗೇಗೌಡ, ಮಹದೇವ್, ಬೋರೇಗೌಡ, ಚಂದ್ರು,
ಜಿ.ಪಂ ಎಇಇ ಮಲ್ಲಿಕಾರ್ಜುನ್, ಚೆಸ್ಕಾಂ ಎಇಇ ಸುನೀಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರು ಇದ್ದರು.