
ಪಿರಿಯಾಪಟ್ಟಣ: ಅಭಿವೃದ್ಧಿ ಕಾರ್ಯ ಹಾಗೂ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಜೆಡಿಎಸ್ ಸೇರ್ಪಡೆಗೊಳ್ಳುವವರಿಗೆ ಸದಾ ಸ್ವಾಗತ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಚೌತಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿದ ಮುಖಂಡರುಗಳನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು, ಶಾಸಕನಾದ ಬಳಿಕ ನಾನು ಹಾಗೂ ನನ್ನ ಮಗ ಮೈಮುಲ್ ಅಧ್ಯಕ್ಷನಾದ ಬಳಿಕ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಅನ್ಯ ಪಕ್ಷಗಳನ್ನು ತೊರೆದು ವಿವಿಧ ವರ್ಗಗಳ ಮುಖಂಡರುಗಳು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವುದು ಶ್ಲಾಘನೀಯ, ಚೌತಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು ಮುಂಬರುವ ದಿನಗಳಲ್ಲಿಯೂ ಮತ್ತಷ್ಟು ಅನುದಾನ ನೀಡುವೆ, ಗ್ರಾಮದಲ್ಲಿರುವ ಸಣ್ಣ ಪುಟ್ಟ ವೈಮನಸ್ಸುಗಳನ್ನು ಬಿಟ್ಟು ಗ್ರಾಮದ ದೇವಸ್ಥಾನ ಅಭಿವೃದ್ಧಿಪಡಿಸಲು ಗ್ರಾಮದ ಯುವಕರು ಮತ್ತು ಮುಖಂಡರು ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕು, ಶಾಸಕನಾಗಿ ಅಧಿಕಾರದಲ್ಲಿ ಎಷ್ಟು ದಿನ ಇರುತ್ತೀನಿ ಎಂಬುದು ಮುಖ್ಯವಲ್ಲ ನನ್ನ ಅವಧಿಯಲ್ಲಿ ಜನತೆಗೆ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಮುಖ್ಯ, ರಾಜ್ಯದಲ್ಲಿ ವಿಪಕ್ಷ ಶಾಸಕನಾಗಿದ್ದರೂ ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ ಎಂದು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಈ ಸಂದರ್ಭ ಜೆಡಿಎಸ್ ತಾಲುಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಲಕ್ಷ್ಮಣ್ ಪಟೇಲ್, ಮಾಜಿ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸದಸ್ಯರಾದ ಸ್ವಾಮಿ, ಶೇಖರ್, ರಾಮೇಗೌಡ, ಕಾಂತರಾಜ್, ಮುಖಂಡರಾದ ರಾಮೇಗೌಡ, ಲಕ್ಷ್ಮಣ್, ಶಿವರಾಜ್, ದೇವರಾಜ್, ಮಹದೇವ್, ಶಿವಪ್ಪ, ಗೋವಿಂದೇಗೌಡ ಮತ್ತು ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.