ಪಿರಿಯಾಪಟ್ಟಣ ತಾಲೂಕಿನ ಕೊಪ್ಪ. ಗ್ರಾಮ ಪಂಚಾಯಿತಿ ವ್ಯಾಪ್ತಿ ರಾಣಿಗೇಟು. ಮತ್ತು ಲಿಂಗಾಪುರ ಗೌಡನ ಕಟ್ಟೆಯ. ಗಿರಿಜನ ಸಮುದಾಯ ವಾಸವಿರುವ ಹಾಡಿಗಳಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯದ ಯೋಜನೆ ಅಡಿಯಲ್ಲಿ ವಸತಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ನಾನು ತಾಲೂಕಿನ ಆದಿವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಅರಿತು ಕಳೆದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಹಿಂದೂ ಅನೇಕ ಮೂಲಭೂತ ಸೌಲಭ್ಯಗಳನ್ನು ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಅಲೆಮಾರಿ ಸಮುದಾಯಕ್ಕೆ 174 ಮನೆಗಳು ಮತ್ತು ಆದಿವಾಸಿ ಬುಡಕಟ್ಟು ಸಮುದಾಯಕ್ಕೆ 380 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಈ ವಸತಿ ನಿರ್ಮಾಣಕ್ಕೆ ತಲಾ. 5ಲಕ್ಷ ರೂ ನೀಡಲಾಗುವುದು. ನೀವುಗಳು ಉತ್ತಮ ಗುಣಮಟ್ಟದ ಮತ್ತು ವಾಸಿಸಲು ಯೋಗ್ಯವಾದ ವಸತಿಯನ್ನು ನಿರ್ಮಿಸಲು ಗಮನಹರಿಸಬೇಕು. ಈ ಹಿಂದೆ ಚೆಸ್ಕಾಂ ಇಲಾಖೆಯು ಆದಿವಾಸಿ ಬುಡಕಟ್ಟು ಸಮುದಾಯದ ವಾಸವಿರುವ ಮನೆಗಳಲ್ಲಿ ವಿದ್ಯುತ್ ಬಿಲ್ಲುಗಳನ್ನು ಪಾವತಿಸದ ಕಾರಣ ಚೆಸ್ಕಾಂ ಇಲಾಖೆಯು ವಿದ್ಯುತ್ತನ್ನು ಕಡಿತಗೊಳಿಸಿದ್ದರು. ನಾನು ಇಂಧನ ಸಚಿವ ಸುನಿಲ್ ಕುಮಾರ್ ರವರನ್ನುಮನವಿ ಮಾಡಲಾಗಿ 15ಲಕ್ಷ 96 ಸಾವಿರ ಬಿಲ್ಲ್ ಸಂಪೂರ್ಣವಾಗಿ ಮನ್ನಾ ಮಾಡಿದ್ದಾರೆ.ಆದರೆ ಮುಂದಿನ ದಿನಗಳಲ್ಲಿ ತಾವು ಬಿಲ್ಲುಗಳನ್ನು ಪಾವತಿಸಲು ಮರೆಯಬಾರದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಚುನಾವಣೆಯು ಸಮೀಪಿಸುತ್ತಿದ್ದು ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನದಲ್ಲಿ ಆದಿವಾಸಿ ಬುಡಕಟ್ಟು ಸಮುದಾಯವು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಎಸ್ ರೇಣುಕಸ್ವಾಮಿ. ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರ. ಕೆ ಕೆ ನಾರಾಯಣ. ಪೂರ್ಣಿಮಾ ಶಾಂತಮ್ಮ. ಸಲೀಂ. ರಾಜಪ್ಪ ಮುಖಂಡರುಗಳಾದ ಶಫಿವುಲ್ಲಾ ಖಾನ್ .ಶೇಖರ್, ಜಯಪ್ಪ. ಲಿಂಗಪ್ಪ. ಸುಂದರ್. ಫಲಾನುಭವಿಗಳಾದ ಮಾಯಮ್ಮ. ಪುಟ್ಟಮ್ಮ. ತಾಯಮ್ಮ. ಲಕ್ಷ್ಮಿ. ಈರಮ್ಮ. ಗಂಗಮ್ಮ. ಸೇರಿದಂತೆ ಮತ್ತಿತರರು ಹಾಜರಿದ್ದರು