
ಪಿರಿಯಾಪಟ್ಟಣ: ಗ್ರಂಥಾಲಯಗಳು ಜ್ಞಾನದ ವರ ನೀಡುವ ದೇವಾಲಯಗಳಿದ್ದಂತೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಂಥಾಲಯಗಳಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು, ಗ್ರಂಥಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೆ ಗಮನಕ್ಕೆ ತಂದರೆ ಬಗೆಹರಿಸುವುದಾಗಿ ಭರವಸೆ ನೀಡಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸುವ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡಿ ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರೌಢಶಾಲಾ ಶಿಕ್ಷಕ ಎನ್.ಆರ್ ಕಾಂತರಾಜು ಅವರು ಮಾತನಾಡಿ ಪುಸ್ತಕಗಳು ಒಂದು ಉತ್ತಮ ಗೆಳೆಯ ಇದ್ದಂತೆ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿನ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು. ಈ ವೇಳೆ ಶಾಸಕ ಕೆ.ಮಹದೇವ್ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಸದಸ್ಯರಾದ ನಿರಂಜನ್, ಶಿಕ್ಷಕ ಪುಟ್ಟಮಾದಯ್ಯ, ಮುಖಂಡರಾದ ಮುಶಿರ್ ಖಾನ್, ಮಹದೇವ್, ಉಮೇಶ್, ಗ್ರಂಥಾಲಯ ಮೇಲ್ವಿಚಾರಕಿ ರೇವತಿ, ಸಹಾಯಕ ಶ್ರೀನಿವಾಸ್, ಓದುಗರಾದ ಗಣೇಶ್, ಸುನಿಲ್, ಪ್ರತಾಪ್, ಮಂಜುನಾಥ್ ಇದ್ದರು.