ಪಿರಿಯಾಪಟ್ಟಣ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಶಾಸಕ ಕೆ ಮಹದೇವ್ ನೇತೃತ್ವದಲ್ಲಿ ನಡೆಯಿತು. ಶಾಸಕ ಕೆ ಮಹದೇವ ಮಾತನಾಡಿ ಪ್ರತಿ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯಾಗಿ ಪರಿವರ್ತಿಸಲು ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಕೆಲವು ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷಯಿಂದ ಅಭಿವೃದ್ಧಿ ಕಾರ್ಯಗಳು ಕುಂಟುತ್ತ ಸಾಗಿದ್ದು ಗ್ರಾಮ ಪಂಚಾಯತಿಯ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಲು ಎಲ್ಲಾ ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳಿ ತಿಳಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿ ಕೃಷ್ಣಕುಮಾರ್ ಗೆ ತಿಳಿಸಿದರು,
ಈಗಾಗಲೇ ಅಂಬೇಡ್ಕರ್ ಭವನ ಪ್ರಗತಿಯಲ್ಲಿದ್ದು ಇದನ್ನು ಸಂಪೂರ್ಣಗೊಳಿಸಿ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆ ಮಾಡಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್ ರಕ್ಷಿತ್ ಗೆ ತಿಳಿಸಿದರು ,ಈ ಸಂದರ್ಭದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಈಗಾಗಲೇ ಸರ್ಕಾರದಿಂದ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಎಂದು ಕೇವಲ ಒಂದು ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಅವಧಿಯಲ್ಲಿ ಒಂದುವರೆ ಕೋಟಿ ಹಣವನ್ನು ಮಂಜೂರು ಮಾಡಿಸಿದ್ದೀರಿ, ಆದರೆ ಆ ಹಣವು ಭವನ ನಿರ್ಮಾಣಕ್ಕೆ ಸಾಕಾಗುತ್ತಿಲ್ಲ ಆದಕಾರಣ ಇನ್ನು ಹೆಚ್ಚಿನ ಹಣಬೇಕೆಂದು ತಿಳಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಂಬೇಡ್ಕರ್ ಭವನಕ್ಕೆ ಬೇಕಾದಂತಹ ಹೆಚ್ಚುವರಿ ಹಣವನ್ನು ಪುರಸಭೆಯಿಂದ ಬರಿಸಲಾಗುವುದು ಶೀಘ್ರವೇ ಇದರ ನಿರ್ಮಾಣದ ಕಾರ್ಯವನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, ಹಾಗೂ ಅಧಿಕಾರಿಗಳು ಸಭೆಗೆ ಯಾವುದೇ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡದೆ ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿಯ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಡಿ ಪಿ ಸದಸ್ಯ ಜವರಪ್ಪ ಮಾತನಾಡಿ ತಾಲೂಕು ಕಚೇರಿಯ ಕೆಲವು ಸಿಬ್ಬಂದಿಗಳು ಅತಿವೃಷ್ಟಿ ಇಂದ ಹಾನಿ ಗೊಳಗಾದ ಮನೆಗಳಿಗೆ ಹಣ ಪಡೆದಿದ್ದು’ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಹಸಿಲ್ದಾರ್ ಅವರಿಗೆ ತಿಳಿಸಿದರು ,ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಚಂದ್ರ ಮೌಳಿ ಅಂತ ಪ್ರಕರಣಗಳು ನನಗೆ ತಿಳಿದಿಲ್ಲಾ ಮಾಹಿತಿ ಇದ್ದಲ್ಲಿ ಬರವಣಿಗೆ ಮೂಲಕ ಲಿಖಿತವಾಗಿ ದೂರು ನೀಡಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ,ಈ ಸಂದರ್ಭದಲ್ಲಿ ಶಾಸಕ ಕೆ ಮಹದೇವ್ ಜಿಲ್ಲಾ ಪಂಚಾಯತ್ ಮತ್ತು ಲೋಕಪ್ಪಯೋಗಿ ಇಲಾಖೆಯಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ರಸ್ತೆ ಸೌಲಭ್ಯ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಈಗಾಗಲೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿರುವಂತಹ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಹಾಗೂ ಅಭಿವೃದ್ಧಿ ಕಾರ್ಯ ಮುಗಿಸಿದಂತಹ ರಸ್ತೆಗಳು ಮತ್ತು ಇನ್ನಿತರ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟವನ್ನು ಪರೀಕ್ಷಿಸಿ ನನಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು, ಯಾವುದೇ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು ಮತ್ತು ಇಲಾಖೆಯ ಕಟ್ಟಡಗಳ ಅಭಿವೃದ್ಧಿಗೆ ಹಣಕಾಸು ಮತ್ತ ಮತ್ತಿತರ ಸೌಕರ್ಯಗಳು ಬೇಕಿದ್ದಲ್ಲಿ ನನ್ನನ್ನು ಬಂದು ಸಂಪರ್ಕಿಸಬೇಕು, ಅದನ್ನು ಬಿಟ್ಟು ಕೇವಲ ಪತ್ರ ವ್ಯವಹಾರ ಮಾಡಿಕೊಂಡು ಕಾಲಹರಣ ಮಾಡಬೇಡಿ ತಮ್ಮ ಬೇಡಿಕೆಗಳು ಏನಾದರೂ ನನ್ನ ಬಳಿ ಇಟ್ಟಲ್ಲಿ ಸರ್ಕಾರದ ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಇಲಾಖೆಗಳಿಗೆ ಬೇಕಿರುವ ಹಣಕಾಸು ಸೌಲಭ್ಯವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರ ಮೌಳಿ ,ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಕುಮಾರ್, ಕೆಡಿಪಿ ಸದಸ್ಯರಾದ ಜವರಪ್ಪ ,ಶಿವರುದ್ರ’ ಗೀತಾ, ಆನಂದ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.