ಪಿರಿಯಾಪಟ್ಟಣ: ಸಿದ್ದರಾಮಯ್ಯನವರೊಂದಿಗೆ ನನಗೆ ಉತ್ತಮ ಬಾಂಧವ್ಯ ವಿದ್ದು ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು ನಾನು ಎಂದಿಗೂ ಕುರುಬ ಸಮಾಜದ ವಿರೋಧಿಯಲ್ಲ ಎಂದು ಶಾಸಕ ಕೆ ಮಾಹದೇವ ತಿಳಿಸಿದರು.
ಹುಚ್ಚೇಗೌಡನ ಕೊಪ್ಪಲು ನಲ್ಲಿ 81 ಲಕ್ಷ ರೂ ವೆಚ್ಚದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಾತಿ ತಾರತಮ್ಯ ಮಾಡದೆ ತಾಲೂಕಿನ ಪ್ರತಿ ಗ್ರಾಮದಲ್ಲೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನಗರ ಪ್ರದೇಶದಲ್ಲಿ ಸಿಗುವ ಸವಲತ್ತುಗಳನ್ನು ಗ್ರಾಮಾಂತರದಲ್ಲೂ ಸಿಗುವಂತೆ ಮಾಡುವುದೇ ನನ್ನ ಕನಸಾಗಿದು
ನಾನು ಯಾವುದೇ ಜಾತಿ ರಾಜಕೀಯ ಮಾಡದೆ ಎಲ್ಲಾ ವರ್ಗದ ಜನಾಂಗಕ್ಕೂ ಅಭಿವೃದ್ಧಿಗೆ ಅನುದಾನ ನೀಡುತ್ತಾ ಬಂದಿರುತ್ತೇನೆ. ಈ ಹಿಂದೆ ತಾಲೂಕಿನ ಶಾಸಕರಾಗಿದ್ದವರು ಮೂಲಭೂತ ಸೌಕರ್ಯಗಳನ್ನು ನೀಡದೆ ಕೆಲ ವರ್ಗದ ಜನಾಂಗವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಬಳಸಿಕೊಳ್ಳುವ ಮೂಲಕ ಮತ ಪಡೆದರೆ. ಹೊರತು ಆ ವರ್ಗದ ಜನಾಂಗಕ್ಕೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿರುವುದು ಸಹ ನಾವು ಈಗಲೂ ಕಾಣಬಹುದಾಗಿದೆ ಆದರೆ ನಾನು ಮತದಾನದ ಲೆಕ್ಕ ಹಾಕಿಕೊಳ್ಳದೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.
ಶಾಸಕರ ಅಭಿವೃದ್ಧಿ ಕಾರ್ಯವನ್ನು ಮನಗಂಡಂತಹ ಕೊತ್ತವಳ್ಳಿ, ಕೊತ್ತವಳಿ ಕೊಪ್ಪಲು, ಹುಚ್ಚೇಗೌಡನ ಕೊಪ್ಪಲು ಗ್ರಾಮಗಳ 50ಕ್ಕೂ ಹೆಚ್ಚು ಯುವ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಸ್ವಯಂ ಪ್ರೇರಿತರಾಗಿ ಶಾಸಕರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಎಇಇ ಮಲ್ಲಿಕಾರ್ಜುನ್ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಜೆಡಿಎಸ್ ಘಟಕದ ಕಾರ್ಯದರ್ಶಿ ಆರ್ ಎಲ್ ಮಣಿ, ಮುಖಂಡರಾದ ಆರ್ ವಿ ನಂದೀಶ್, ಬಸವಣ್ಣ, ನಟೇಶ್, ಪಾಲಾಕ್ಷ, ಮಂಜು, ಪ್ರೇಮ್ ಕುಮಾರ, ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.