ನಾನು ಶಾಸಕನಾಗಿ ಆಯ್ಕೆಗೊಂಡ ಸಂಧರ್ಭದಿAದ ಜನರ ಸೇವೆಗಾಗಿ ಮೀಸಲಿದ್ದೇನೆ ಹೊರತು ಸುಳ್ಳಿನ ಮೂಟೆಯನ್ನು ಹೊತ್ತುಕೊಂಡು ಓಡಾಡುತ್ತಿಲ್ಲ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ತಂದ್ರೆಗುಡಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಸಂಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಬಳಿಕ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಕೈ ಕಾರ್ಯಕರ್ತರ ಸಭೆಯಲ್ಲಿ ತಾಲೂಕಿನಲ್ಲಿ ಅಪ್ಪ ಮಕ್ಕಳು ಸುಳ್ಳಿನ ಮೂಟೆ ಕಟ್ಟಿಕೊಂಡು ಗ್ರಾಮಗಳಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಶಾಸಕರಾಗಿ ೩೦ ವರ್ಷಗಳಿಂದ ತಾಲೂಕಿನ ಜನತೆಗೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ, ಕೆಲಸ ಮಾಡದೆ ಹಾಗೆ ಬಿಟ್ಟಿದ್ದಾರೆ ನಿಜವಾಗಿ ಸುಳ್ಳು ಹೇಳಿಕೊಂಡು ಓಡಾಡಿದವರು ಅವರು. ನನ್ನ ಅವಧಿಯಲ್ಲಿ ಗುದ್ದಲಿ ಪೂಜೆ ಮಾಡಿ ಕೆಲಸ ಪೂರ್ಣಗೊಳ್ಳದೇ ಯಾವುದಾದರೂ ಕಾಮಗಾರಿಗಳು ಬಾಕಿ ಇದ್ದರೆ ತೋರಿಸಲಿ ಎಂದು ಸಭೆಯಲ್ಲಿ ಮಾಜಿ ಶಾಸಕ ಕೆ.ವೆಂಟಕೇಶ್ಗೆ ಸವಾಲು ಹಾಕಿದರು.
ತಂದ್ರೆಗುಡಿ ಕೊಪ್ಪಲು ವ್ಯಾಪ್ತಿಯ ವಿವಿಧ ಗ್ರಾಮಗಳು ಸುಮಾರು ೩೦ ವರ್ಷಗಳಿಂದ ಸಮರ್ಪಕ ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೆ ಕುಂಟಿತಗೊAಡಿದ್ದವೇ. ಅಂದು ನೀವು ಆಯ್ಕೆ ಮಾಡಿ ಕಳಿಸಿದ್ದ ಶಾಸಕನನ್ನು ಪ್ರಶ್ನೆ ಮಾಡಿ ಕೇಳಿದರೆ ಇಂದು ಗ್ರಾಮಗಳು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಮೀಪದಲ್ಲಿಯೇ ಮಾಜಿ ಶಾಸಕರ ಮನೆ ಇದೆ. ಆದರೂ ಆ ವ್ಯಕ್ತಿ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದರೆ ಈ ಬಗ್ಗೆ ನೀವೇ ಯೋಚಿಸಬೇಕು ಎಂದರು.
ಹಾಲುಮತ ಸಮಾಜದವರು ಇರುವ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ನನಗೆ ಕೆಲವರು ಹಣೆಪಟ್ಟಿ ಕಟ್ಟಿದರು. ನಾನು ತಾಲೂಕಿನ ಎಲ್ಲಾ ವರ್ಗದ ಹಾಗೂ ಸಮಾಜದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಈಗಾಗಲೇ ಕುರುಬ ಸಮಾಜದವರು ಇರುವ ಗ್ರಾಮಗಳಿಗೆ ಅನುದಾನ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇಂತಹ ಆರೋಪ ಮಾಡುವವರು ಮಾಜಿ ಶಾಸಕರು ತಮ್ಮ ಗ್ರಾಮಗಳಿಗೆ ಏನು ಕೊಡುಗೆ ಕೊಟ್ಟಿದ್ದರು ಎಂಬುದರ ಬಗ್ಗೆ ಪ್ರಶ್ನೆ ಹಾಕಿಕೊಳ್ಳಬೇಕು. ಅಲ್ಲದೇ ಜನರು ಇಂತಹ ಅಪಪ್ರಚಾರ ಮಾತುಗಳಿಗೆ ಗಮನ ನೀಡದೆ ಕೆಲಸ ಮಾಡುವವರಿಗೆ ಸಹಕಾರ ನೀಡಿ ಆಶೀರ್ವಾದ ಮಾಡಬೇಕು ಎಂದರು.
ಬಿಜೆಪಿಗೆ ಹೋಗುವುದಿಲ್ಲ,
ರಾಜ್ಯದ ೨೨೪ ಶಾಸಕರಂತೆ ನಾನು ಕೂಡ ಒಬ್ಬ ಶಾಸಕನಾಗಿದ್ದೇನೆ. ಅಲ್ಲದೆ ಎಲ್ಲರೊಂದಿಗೆ ವಿಶ್ವಾಸದಲ್ಲಿದ್ದೇನೆ. ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಗೆ ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡಿ ಶ್ರಮಿಸುತ್ತಿದ್ದೇನೆ. ನಮ್ಮ ಸರ್ಕಾರ ಬೀಳುವ ಸಂದರ್ಭದಲ್ಲಿ ಬಿಜೆಪಿಯವರು ಮನೆ ಬಾಗಿಲಿಗೆ ಬಂದು ಕರೆದಿದ್ದಾಗಲೇ ಆ ಪಕ್ಷಕ್ಕೆ ಹೋಗಿಲ್ಲ ಇನ್ನ ಈ ಸಂದರ್ಭದಲ್ಲಿ ಹೋಗುವ ಮಾತೇ ಇಲ್ಲ. ಜನರ ನಂಬಿಕೆಯೇ ನನಗೆ ಮಹಾಶಕ್ತಿಯಾಗಿದೆ ಅವರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಎಂದಿಗೂ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.
ಪಕ್ಷ ಸೇರ್ಪಡೆ,
ಸಭೆ ಕಾರ್ಯಕ್ರಮಕ್ಕೂ ಮುನ್ನ ಬೆಟ್ಟದಪುರ ಸಮೀಪದ ಅರಳಿ ಮರದ ಕೊಪ್ಪಲು, ಮರದೂರು ಹಾಗೂ ಮರದೂರು ಮೂಡಲು ಕೊಪ್ಪಲು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ವಿವಿಧ ಗ್ರಾಮಗಳಲ್ಲಿ ಹಲವಾರು ಯುವಕರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷ ತೊರದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಶಾಸಕ ಕೆ.ಮಹದೇವ್ ಅವರು ಜೆಡಿಎಸ್ ಶಲ್ಯ ಹಾಕಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಂಗಸ್ವಾಮಿ, ಮಲ್ಲಿಕಾರ್ಜುನ್, ರೈತ ಮುಖಂಡ ಬಿ,ಜೆ ದೇವರಾಜು, ಮುಖಂಡರಾದ ಕುಮಾರ್, ಲಕ್ಷö್ಮಣೇಗೌಡ, ಪುಟ್ಟರಾಜು, ನಟೇಶ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರುಗಳು ಹಾಜರಿದರು.