ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಅಮೃತ್ ನಗರೊತ್ತಾನ ಯೋಜನೆಯಲ್ಲಿ 4.50 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಮಾಜಿ ಶಾಸಕ ಕೆ.ವೆಂಕಟೇಶ್ ಗೆ 75 ವರ್ಷ ವಯಸ್ಸಾಗಿದೆ ಸುಮ್ಮನೆ ಮನೆಯಲ್ಲಿ ಕೂರುವುದನ್ನು ಬಿಟ್ಟು ಹಣ ಮಾಡಲು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ದುರಂಕಾರದಿಂದ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿಕೊಂಡು ತಿರುಗುತ್ತಿರುವುದು ಸರಿಯಲ್ಲ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಶಾಸಕರಾದ ಜಿ.ಟಿ ದೇವೇಗೌಡ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ ಮೈಮುಲ್ ಅಧ್ಯಕ್ಷ ಹಾಗೂ ಅಧಿಕಾರಿಗಳನ್ನು ಕರೆತಂದು ಸಾವಿರಾರು ಜನರ ಸಮ್ಮುಖದಲ್ಲಿ ಪಶು ಆಹಾರ ಘಟಕ ಉತ್ಪಾದನೆ ಮಾಡುವ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಆದರೆ ನಾನು ಪ್ರಚಾರಗಿಟ್ಟಿಸಲು ಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದೇನೆ ಎಂದು ಮಾಜಿ ಶಾಸಕರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಪಿರಿಯಾಪಟ್ಟಣದಲ್ಲಿ ವೇದಿಕೆ ಸಿದ್ಧಪಡಿಸಲಿ ನಾನು ಎಷ್ಟು ಕಾಮಗಾರಿ ಮಾಡಿದ್ದೇನೆ ಎಂದು ತೋರಿಸುತ್ತೇನೆ ಅವರು 30 ವರ್ಷದಲ್ಲಿ ಏನು ಕಾಮಗಾರಿ ಮಾಡಿದ್ದಾರೆ ಅವರು ತೋರಿಸಲಿ ಎಂದು ಸವಾಲು ಹಾಕಿದರು, ಐಷಾರಾಮಿ ಜೀವನ ನಡೆಸುವ ಇವರು ಜನರಿಂದ ಮತಗಳಿಸಲು ಸಿದ್ದರಾಮಯ್ಯ ಹೆಸರು ಹೇಳಿಕೊಂಡು ಮತ ಪಡೆದು ಗೆದ್ದು ಮೋಜು ಮಸ್ತಿ ಮಾಡುತ್ತಿದ್ದರು ಎಂದರು.
ಈ ವೇಳೆ ಹಲವು ವಾರ್ಡ್ ಗಳಲ್ಲಿ ಸಾರ್ವಜನಿಕರು ಶಾಸಕ ಕೆ.ಮಹದೇವ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭ ಪುರಸಭಾ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ಅಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಭಾರತಿ, ನಿರಂಜನ್, ರೇವತಿ, ರವಿ, ಮುಖ್ಯಾಧಿಕಾರಿ ಮಹೇಂದ್ರ ಕುಮಾರ್, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಮುಖಂಡರುು ಇದ್ದರು.