ಪಿರಿಯಾಪಟ್ಟಣ: ಎನ್ ಪಿಎಸ್ ಪದ್ದತಿ ರದ್ದುಗೊಳಿಸಿ ಓಪಿಎಸ್ ಪದ್ದತಿ ಜಾರಿಗೊಳಿಸುವಂತೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವಂತೆ ತಾಲೂಕು
ಎನ್ ಪಿಎಸ್ ಘಟಕದ ಪದಾಧಿಕಾರಿಗಳು ಶಾಸಕ ಕೆ. ಮಹದೇವ್ ಅವರಿಗೆ ಮನವಿ ನೀಡಿದರು.
ಏನ್ ಪಿಎಸ್ ಘಟಕದ ತಾಲೂಕು ಅಧ್ಯಕ್ಷ ನಿರಂಜನ್ ಅವರು ಮಾತನಾಡಿ ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಕ್ಕೂ ಹೆಚ್ಚು ನೌಕರರು ಎನ್ ಪಿಎಸ್ ಪದ್ದತಿಗೆ ಒಳಪಡುತ್ತಿದ್ದು ಇದರಿಂದ ಅವರು ನಿವೃತ್ತಿಯಾದ ವೇಳೆ ಜೀವನ ಸಾಗಿಸಲು ತುಂಬಾ ತೊಂದರೆಯಾಗುವುದನ್ನು ಮನಗಂಡು ಸರ್ಕಾರ ಈ ಕೂಡಲೇ ಪದ್ಧತಿ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕ
ಕೆ.ಮಹದೇವ್ ಅವರು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖೆಯವರೊಂದಿಗೆ ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭ ಏನ್ ಪಿಎಸ್ ತಾಲೂಕು ಘಟಕದ ಕಾರ್ಯದರ್ಶಿ ಉಷಾ, ಪದಾಧಿಕಾರಿಗಳಾದ ತೋಂಟರಾಜು, ಶಮಿತ, ರಾಜು, ರವಿ, ಪ್ರಸನ್ನ ಮತ್ತಿತರಿದ್ದರು.