ಟೀಕೆ ಮಾಡುವವರಿಗೆ ಅಭಿವೃದ್ಧಿ ಕೆಲಸಗಳೇ ನೇರ ಉತ್ತರವಾಗಿದೆ ಚಪ್ಪರದಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಜನರ ನಿರೀಕ್ಷೆಯಂತೆ ನಾನು ತಾಲೂಕಿನ ಅಭಿವೃದ್ಧಿ ಶ್ರಮವಹಿಸಿ ಅನುದಾನ ತಂದರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಟೀಕೆ ಮಾಡುವ ವಿರೋಧಿಗಳಿಗೆ ನನ್ನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳೇ ನೇರ ಉತ್ತರವಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸೋಮವಾರ ಸಿ.ಸಿ ರಸ್ತೆ ಅಭಿವೃದ್ಧಿ ಹಾಗೂ ಸರ್ಕಾರಿ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.

ಕಳೆದ ಮೂವತ್ತು ವರ್ಷಗಳ ಕಾಲ ಶಾಸಕನಾಗಿದ್ದ ವ್ಯಕ್ತಿಯನ್ನು ತಾಲೂಕಿನ ಜನರು ಪ್ರಶ್ನೆ ಮಾಡಿ ಕೆಲಸ ಮಾಡಿದ್ದರೆ. ಇಂದು ನಾನು ಟೀಕೆಗೆ ಗುರಿಯಾಗುತ್ತಿರಲಿಲ್ಲ. 2018ರಲ್ಲಿ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಅತಿಯಾದ ಮಳೆಯ ಸಮಸ್ಯೆ ಹಾಗೂ ಕರೊನಾ ಅಂತಹ ಸಂಕಷ್ಟದ ಮೂರು ವರ್ಷಗಳ ಕಾಲವನ್ನು ಎದುರಿಸಿದ್ದೇನೆ.

ಅಲ್ಲದೆ ರಾಜ್ಯದಲ್ಲಿ ನಮ್ಮ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರು ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಪಟ್ಟು ಹಿಡಿದು ಅನುದಾನ ತಂದು ಕೆಲಸ ಮಾಡಲಾಗುತ್ತಿದೆ. ಅನುದಾನ ಬಿಡುಗಡೆ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಅಲ್ಲದೇ ಅಂತಹ ಕೆಲಸಗಳು ಶೀಘ್ರದಲ್ಲಿಯೇ ಆರಂಭಗೊಳ್ಳುವ ಮೂಲಕ ಜನರ ಸೇವೆಗೆ ದೊರೆಯುತ್ತಿವೆ ಎಂದರು.
ಈ ಹಿಂದೆ ಒಬ್ಬ ಶಾಸಕನನ್ನು ಜನರು ನೇರವಾಗಿ ಹೋಗಿ ಸಂಪರ್ಕ ಮಾಡುವುದಕ್ಕೆ ಆಗುತ್ತಿರಲಿಲ್ಲ. ಒಬ್ಬ ಮುಖಂಡನ್ನು ಹಿಡಿದು ಬಳಿಕ ಸಂಪರ್ಕ ಮಾಡಬೇಕಿತ್ತು. ಆದರೆ ನನ್ನನ್ನು ಭೇಟಿ ಮಾಡುವುದಕ್ಕೆ ಅಂತಹ ಕಷ್ಟ ಪಡುವ ಅಗತ್ಯವಿಲ್ಲ. ನೇರವಾಗಿ ಬಂದು ಭೇಟಿ ಮಾಡುವುದು ಅಥವಾ ನನ್ನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ಒಬ್ಬ ಶಾಸಕನಾದವನು ಅಹಂ, ಅಧಿಕಾರದ ಮದ ಬಿಟ್ಟು ಜನರ ಬಳಿ ಹೋಗಿ ಕೆಲಸ ಮಾಡಿದ್ದರೆ ಮಾತ್ರ ಜನರ ಸಮಸ್ಯೆ ಅರ್ಥವಾಗುವುದು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಹಿತದೃಷ್ಠಿಯಿಂದ ತಾಲೂಕಿನಲ್ಲಿ ಸುಮಾರು 200ಕ್ಕೂ ಹೆಚ್ಚಿನ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಹಳ್ಳಿ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಸಿ.ಎಸ್ ಕುಶಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್ ದೇವೆಗೌಡ, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಸಿ.ಕೆ ವೆಂಟಕೇಶ್, ಸಿ.ಪಿ ಸುರೇಶ್, ಸಿ.ಎಸ್ ಗಣೇಶ್, ಸರಸ್ಪತಿಅರುಣ್, ಸುನಿತಾಮಂಜು, ಧರಣೇಶ್, ಮುಖಂಡರಾದ ಸಿ.ಎನ್ ಕಾಳೇಗೌಡ, ರಾಜೇಗೌಡ, ಕಾಳೇಗೌಡ, ಪುಟ್ಟಸ್ವಾಮಿಗೌಡ, ನಾಗರಾಜು, ಅತ್ತರ್ ಮತೀನ್, ಕೆ.ಮಹದೇವ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ವೈದ್ಯಾಧಿಕಾರಿ ಡಾ.ಸಂದೀಪ್, ಉಪತಹಸೀಲ್ದಾರ್ ಮಹೇಶ್, ಕಂದಾಯ ನಿರೀಕ್ಷೆ ಎನ್.ಕೆ ಪ್ರದೀಪ್, ಪಿಡಿಒ ಶ್ರೀದೇವಿ, ಮುಖ್ಯಶಿಕ್ಷಕ ಶಿವಾನಂದ್ ಸೇರಿದಂತೆ ಡೈರಿ, ಸೊಸೈಟಿ ನಿರ್ದೇಶಕರು ಹಾಗೂ ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top