ಪಿರಿಯಾಪಟ್ಟಣ: ಅಧಿಕಾರವಧಿಯಲ್ಲಿ ರಾಜಕೀಯ ಘರ್ಷಣೆಗೆ ಅವಕಾಶ ನೀಡದೆ ಸರ್ವ ಜನಾಂಗದವರನ್ನು ಸಮನಾಗಿ ಕಂಡು ಶಾಂತಿ ಸಹ ಬಾಳ್ವೆಯಾ ಆಡಳಿತ ನೀಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು, 30 ವರ್ಷ ತಾಲೂಕಿನಲ್ಲಿ ದುರಾಡಳಿತ ನಡೆಸಿರುವ ಮಾಜಿ ಶಾಸಕ ಕೆ.ವೆಂಕಟೇಶ್ ಚುನಾವಣೆ ಸಮೀಪಿಸಿದಂತೆ ಮತ್ತೆ ಹಳ್ಳಿಹಳ್ಳಿ ಸುತ್ತಿ ಮತದಾರರಿಗೆ ನನ್ನ ವಿರುದ್ಧ ಅಪಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದು ತಾಲೂಕಿನ ಜನತೆ ಸುಳ್ಳು ವದಂತಿಗಳಿಗೆ ಕಿವಿಗೊಡದೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ಜೆಡಿಎಸ್ ಪಕ್ಷದಿಂದ ಎಲ್ಲೇ ಸಭೆ ನಡೆಸಿದರು ಸ್ಥಳಿಯ ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸಲಾಗುತ್ತದೆ ಕಾಂಗ್ರೆಸ್ ಪಕ್ಷದವರಂತೆ ತಾಲೂಕಿನ ಜನರನ್ನು ಕರೆಸಿ ಶೋ ಅಪ್ ಕೊಡುವುದಿಲ್ಲ, ಅಪ್ಪ ಮಗನನ್ನು ಮಗ ಅಪ್ಪನನ್ನು ಮೀರಿಸುತ್ತಾನೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ ಹೌದು ಅಭಿವೃದ್ಧಿ ಕೆಲಸದಲ್ಲಿ ಮಾತ್ರ ನಾನು ಅಪ್ಪನನ್ನು ಮೀರಿಸುತ್ತೇನೆ ಅಪ್ಪ ಶಾಸಕ ಕೆ.ಮಹದೇವ್ ಅವರು ನನ್ನನ್ನು ಮಿರಿಸುತ್ತಾರೆ, ಕಾರ್ಯಕರ್ತರ ಹೋರಾಟದ ಫಲವಾಗಿ ನಾವು ಅಧಿಕಾರದಲ್ಲಿದ್ದು ಮುಂದಿನ ದಿನಗಳಲ್ಲಿಯೂ ಸಂಘಟಿತರಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಕೋರಿದರು.
ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ತಾ.ಪಂ ಮಾಜಿ ಸದಸ್ಯ ಎಸ್.ರಾಮು, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಆರ್.ಎಲ್ ಮಣಿ, ಟಿಏಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ ಮಾತನಾಡಿದರು, ಪಂಚಾಯಿತಿ ವ್ಯಾಪ್ತಿಯ ಹಲವು ಮುಖಂಡರು ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ನೇತೃತ್ವ ಜೆಡಿಎಸ್ ಸೇರಿದರು, ಕಾರ್ಯಕ್ರಮಕ್ಕೂ ಮೊದಲು 93 ಲಕ್ಷ ವೆಚ್ಚದ ಹಂಡಿತವಳ್ಳಿ ಬಾವಲಾಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣವನ್ನು ಶಾಸಕರು ಉದ್ಘಾಟಿಸಿದರು, ಶಾಸಕರು ಹಾಗೂ ಪಕ್ಷದ ಮುಖಂಡರನ್ನು ತೆರೆದ ವಾಹನದಲ್ಲಿ ಮಂಗಳವಾದ್ಯ ಹಾಗೂ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸುವ ಮೂಲಕ ಪಟಾಕಿ ಸಿಡಿಸಿ ಜೈಕಾರ ಕೂಗಿ ಹುಾ ಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಮುಖಂಡರಾದ ರಾಮಚಂದ್ರ, ಎ.ಟಿ ರಂಗಸ್ವಾಮಿ, ಗ್ರಾ.ಪಂ ಸದಸ್ಯ ದೀಪು, ದಿನೇಶ್, ಪ್ರೇಮ್ ಕುಮಾರ್, ನವೀನ್ ಸೇರಿದಂತೆ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇದ್ದರು.