ಪಿರಿಯಾಪಟ್ಟಣದಲ್ಲಿ ಅಮೃತ್ ನಗರ ಯೋಜನೆ ಅಡಿಯಲ್ಲಿ ಪುರಸಭಾ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಸುಮಾರು 83.71 ಲಕ್ಷ ವೆಚ್ಚದ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ ಮಹದೇವ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನೆರೆ ಹಾಗೂ ಕೋವಿನ್ನಂತಹ ಅನೇಕ ಸಮಸ್ಯೆಗಳು ಉದ್ಭವದ ಹಿನ್ನೆಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಮೂರು ವರ್ಷ ಯಾವುದೇ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಆದರೂ ನಮ್ಮ ಜೆಡಿಎಸ್ ಪಕ್ಷದ ಸರ್ಕಾರ ಇಲ್ಲದಿದ್ದರೂ ಆಡಳಿತ ಸರ್ಕಾರದ ಜೊತೆ ಹೊಂದಾಣಿಕೆ ಇಟ್ಟುಕೊಂಡು ಎರಡು ವರ್ಷದ ಅವಧಿಯಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ತಾಲೂಕು ಅಭಿವೃದ್ಧಿ ಮಾಡುತ್ತೇನೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಜೆಡಿಎಸ್ ಪಕ್ಷದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಪುರಸಭಾ ಅಧ್ಯಕ್ಷ ಕೆ ಮಹೇಶ್ ಉಪಾಧ್ಯಕ್ಷೇ ಆಶಾ ಸದಸ್ಯರಾದ ನಿರಂಜನ್ ಮಂಜುನಾಥ್ ಸಿಂಗ್ ಟಿ ಸಿ ಕೃಷ್ಣ ಪ್ರಕಾಶ್ ಸಿಂಗ್ ಪುರಸಭಾ ಮುಖ್ಯ ಅಧಿಕಾರಿ ಮಹೇಂದ್ರ ಜಿಲ್ಲಾ ಪಂಚಾಯತ್ ಇಂಜಿನಿಯರ್ ಸುಭಾಷ್ ಎಮ್ ಸಿ ಡಿ ಸಿ ಸಿ ನಿರ್ದೇಶಕ ರವಿ ಮುಖಂಡರಾದ ರಘುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.