ಪಿರಿಯಾಪಟ್ಟಣ ತಾಲೂಕಿನ ಚಾಮರಾಯನಕೋಟೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು

ಪಿರಿಯಾಪಟ್ಟಣ: ತಾಲೂಕಿನ ವಿವಿಧಡೆ 2.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.

ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಶಾಸಕನಾದ ಬಳಿಕ ಪಕ್ಷಭೇದ ಹಾಗೂ ಜಾತಿಭೇದ ಮಾಡದೆ ಯಾರೇ ನನ್ನ ಬಳಿಗೆ ಬಂದು ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದ ಸಂದರ್ಭ ಪ್ರಾಮಾಣಿಕವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ತೃಪ್ತಿ ಇದೆ, ಮತದಾರರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಬೆಂಬಲಿಸಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಶಾನುಭೋಗನಹಳ್ಳಿ ಗ್ರಾಮಕ್ಕೆ ಶಾಸಕರು ಆಗಮಿಸಿದ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರು ಜೆಡಿಎಸ್ ಪಕ್ಷ ಸೇರಿದರು ಬಳಿಕ ಕೃಷ್ಣಪ್ಪ ಅವರು ಮಾತನಾಡಿ ಜನಪ್ರತಿನಿಧಿಯಾದವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಶಕ್ತಿ ಇರಬೇಕು ಈ ನಿಟ್ಟಿನಲ್ಲಿ ಶಾಸಕ ಕೆ.ಮಹದೇವ್ ಅವರ ಕಾರ್ಯ ಶ್ಲಾಘನೀಯವಾದದ್ದು ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು. 

ಈ ವೇಳೆ ಕೆ.ಬಸವನಹಳ್ಳಿ, ಕಣಗಾಲು, ಕಣಗಾಲು ಕೊಪ್ಪಲು, ಚಾಮರಾಯನಕೋಟೆ, ಹೊನ್ನಾಪುರ, ದೊಡ್ಡಕಮರವಳ್ಳಿ, ಬೆಣಗಾಲು, ಬಿಲಗುಂದ ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಹೊನ್ನಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮತ್ತು ಮೇಲ್ತೊಟ್ಟಿ ಉದ್ಘಾಟನೆ, ಬೆಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ಜಿ.ಪಂ ಎಇಇ ಮಲ್ಲಿಕಾರ್ಜುನ್, ಎಇ ಮೇಘ, ಹಾರಂಗಿ ಇಲಾಖೆ ಎಇಇ ನವೀನ್, ಎಇ ಶಿವಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ದೊಡ್ಡಕಮರಹಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಪುಟ್ಟಸ್ವಾಮಿಗೌಡ, ಹರೀಶ್, ಪಾರ್ವತಿ, ಜ್ಯೋತಿ, ಪುಟ್ಟಮ್ಮ, ಮುಖಂಡರಾದ ಕರಡಿಪುರ ಕುಮಾರ್, ವಿದ್ಯಾಶಂಕರ್, ಬಿ.ವಿ ಗಿರೀಶ್, ಮಲ್ಲಿಕಾರ್ಜುನ್, ಅಣ್ಣಯ್ಯ, ಶೇಖರ್, ನಾಗರಾಜಪ್ಪ, ದೊಡ್ಡಪ್ಪ, ಇಂದ್ರೇಶ್, ರಾಜೇಶ್, ಮತ್ತಿತರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top