ಎಲ್ಲ ಜನಾಂಗದವರು ಸಹಬಾಳ್ವೆಯಿಂದ ಬಾಳಲಿ

ಪಿರಿಯಾಪಟ್ಟಣ: ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಯಾವುದೇ ವ್ಯಕ್ತಿಗಳನ್ನು ಸಹಿಸುವುದಿಲ್ಲ ಎಂದು ಶಾಸಕ ಕೆ ಮಹದೇವ್ ಹೇಳಿದರು.
ಎರಡು ದಿನಗಳ ಹಿಂದೆ ಗೋಣಿಕೊಪ್ಪ ರಸ್ತೆ ಚರ್ಚಿನಲ್ಲಿ ಬಾಲ ಯೇಸು ಪ್ರತಿಮೆಯನ್ನು ಭಗ್ನಗೊಳಿಸಿ ಹುಂಡಿಯ ಹಣವನ್ನು ದೋಚಿಕೊಂಡು ಹೋಗಿದ್ದ ಹಿನ್ನೆಲೆ ಚರ್ಚ್ ಗೆ ಭೇಟಿ ನೀಡಿ ಫಾದರ್ ಮತ್ತು ಸಮುದಾಯದ ನಾಯಕರಿಗೆ ಧೈರ್ಯ ತುಂಬಿಯವರು ಮಾತನಾಡಿದರು.
ತಾಲೂಕಿನಲ್ಲಿ ಇದುವರೆಗೂ ನನ್ನ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟಿಲ್ಲ ಯಾವುದೇ ಕೋಮುಗಲಭೆ ಇಲ್ಲದೆ ಎಲ್ಲಾ ಧರ್ಮದ ಜನಾಂಗದವರು ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದು ಗಿಣಿಗೇಡಿಗಳು ಹಣದ ಆಸೆಗೋಸ್ಕರ ಇಂತಹ ದುಷ್ಕೃತ್ಯ ಮಾಡಿರುವುದು ಖಂಡನೀಯ. ಕೇಡಿಗಳನ್ನು ಬಂಧಿಸುವಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು ಪೊಲೀಸ್ ಇಲಾಖೆಯು ಮೂರು ತಂಡಗಳಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಎಂದರು.
ಪುರಸಭಾ ಅಧ್ಯಕ್ಷ ಮಹೇಶ್ ತಹಸಿಲ್ದಾರ್ ಕೆ ಚಂದ್ರಮೌಳಿ ತಾಲೂಕು ಪಂಚಾಯಿತಿ ಇ ಓ ಕೃಷ್ಣಕುಮಾರ್ ಪುರಸಭಾ ಅಧಿಕಾರಿ ಮಹಿಂದ್ರಾ ಪೊಲೀಸ್ ಇನ್ಸ್ಪೆಕ್ಟರ್ ಗಳದ ಶ್ರೀಧರ್ ಪ್ರಕಾಶ್ ಮುಖಂಡರಾದ ಪಿಸಿ ಕೃಷ್ಣ ಮೈಲಾಪುರ ರಾಮು ತಮ್ಮಣ್ಣಯ್ಯ ಶಿವಣ್ಣ ನಾಗೇಂದ್ರ ವೆಂಕಟೇಶ್ ರಾಜಣ್ಣ ಅಣ್ಣ ಮೇರಿ ರಾಣಿ ಜೋಸೆಫ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top