ಪಿರಿಯಾಪಟ್ಟಣ ಜಾತ್ಯತೀತ ಜನತಾದಳ ಪಂಚರತ್ನ ಯೋಜನೆಯಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗಳಿಗೆ ನಡುಕ ಜಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೆಟ್ಟದಪುರ ಸಮೀಪದ ಅಂಬಲಾರೆ ಗ್ರಾಮದಲ್ಲಿ ಬುಧವಾರ ಜಾದಳ ಕಾರ್ಯಕರ್ತರು ಆಯೋಜಿಸಿದ್ದ ಇವರತ್ನ ಚೈತನ್ಯ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು ರೈತರಿಗೆ ನೀಡಿದ್ದ ಭರವಸೆಗಳನ್ನು ಉಳಿಸಿಕೊಡುವ ಏಕೈಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಡವರಿಗೆ ನಿರ್ಗತಿಕರಿಗೆ ರೈತರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಜಾದಳ ಹೊರಟ ಮಾಡಿದೆ ರಾಜ್ಯದ ಜನರು ಬಹುಮತದಿಂದ ಜಾ ದಳವನ್ನು ಅಧಿಕಾರಕ್ಕೆ ತಂದರೆ ಕೊಟ್ಟ ಮಾತಿನಂತೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದರು.
ತಂಬಾಕು ಬೆಲೆ ಏರಳಿತವಾಗುತ್ತಿತ್ತು ಇದರಿಂದ ರೈತರಿಗೆ ತೊಂದರೆಯಾಗಿದೆ ಮುಂದಿನ ದಿನಗಳಲ್ಲಿ ಜಾದಳ ಅಧಿಕಾರಕ್ಕೆ ಬಂದರೆ ಕಂಪನಿಗಳು ತಂಬಾಕು ಬೆಲೆ ನಿರ್ಧಾರ ಮಾಡುವಂತಿಲ್ಲ ರೈತರೆ ತಂಬಾಕು ಬೆಲೆಯನ್ನು ನಿಗದಿ ಮಾಡಬೇಕು ಆ ರೀತಿಯ ವ್ಯವಸ್ಥೆಯನ್ನು ಜಾದಳ ಮಾಡಲಿದೆ. ಯುವಕರು ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ ಸಂಘಟನೆ ಮಾಡಬೇಕು. ಶಾಸಕ ಕೆ ಮಹದೇವ್ ರವರು ಜನರ ಸೇವೆ ಮಾಡುತ್ತಿದ್ದು ಅವರಿಗೆ ಮತ್ತೆ ಐತಿಹಾಸಿಕ ಗೆಲುವು ನೀಡಬೇಕು ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮಹದೇವಣ್ಣನವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಈ ಮೂಲಕ ಮಹದೇವರವರಿಗೆ ಸಚಿವ ಸ್ಥಾನವನ್ನು ನೀಡುವುದು ಖಚಿತ ಎಂದು ತಿಳಿಸಿದರು. ಎಂ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಡಳಿತ ಅವಧಿಯಲ್ಲಿ ರೈತರು ಹಾಗೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಶಾಸಕ ಕೆ ಮಹದೇವರವರು ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಡಿಸುತ್ತಿರುವ ಬಗ್ಗೆ ರಾಜ್ಯದ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಪುತ್ರ ಪಿಎಂ ಪ್ರಸನ್ನ ಅವರು ಮೈಮುಲ್ ಅನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಮೂಲಕ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜಾದಳ ಅಧಿಕಾರಕ್ಕೆ ತರಬೇಕು ಎಂದರು.
ಶಾಸಕ ಕೆ ಮಹದೇವರವರು ಮಾತನಾಡಿ ಹೆಚ್ ಡಿ ದೇವೇಗೌಡ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನು ಬಂದಿದ್ದೇನೆ ಬೇರೆ ಪಕ್ಷದವರು ನನಗೆ 40 ಕೋಟಿ ರೂ ಹಣದ ಆಮೀಷ ಹೊಡ್ಡಿ ಪಕ್ಷಕ್ಕೆ ಬರಲು ಹೇಳಿದರು ಅದನ್ನು ನಿರಾಕರಣೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಜಾದಳಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದರು. ಬಿಜೆಪಿ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಒಟ್ಟು ನೀಡಿದ್ದೇನೆ ಜಾದಳ ಭದ್ರಕೋಟೆಯನ್ನು ಹೊಡೆಯಲು ವಿರೋಧಿಗಳು ಹುನ್ನಾರ ಮಾಡುತ್ತಿದ್ದಾರೆ ಆದರೆ ಪಕ್ಷದ ಕಾರ್ಯಕರ್ತರು ಇದಕ್ಕೆ ಅವಕಾಶ ಮಾಡಿಕೊಡಬಾರದು. ರಾಜಕೀಯ ಕಟ್ಟಿಕೊಟ್ಟ ದೇವೇಗೌಡರಿಗೆ ಅನ್ಯಾಯ ಮಾಡಿದ ಮಾಜಿ ಶಾಸಕರುಬರು ಬೇರೆ ಪಕ್ಷಕ್ಕೆ ಹೋಗಿದ್ದು ಈಗ ಜಾ ದಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ ವೆಂಕಟೇಶ್ ವಿರುದ್ಧ ಗುಡುಗಿದರು.