ನುಡಿದಂತೆ ನಡೆದು ತಾಲೂಕಿನ ಗೌರವ ಕಾಪಾಡಿದ್ದೇನೆ ಕೆ ಮಹದೇವ್

ಪಿರಿಯಾಪಟ್ಟಣ : ನಾನು ಶಾಸಕನಾದ ಮೇಲೆ ನುಡಿದಂತೆ ನಡೆದು ತಾಲೂಕಿನ ಗೌರವ ಕಾಪಾಡಿದ್ದೇನೆ ಇದನ್ನು ವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಜನತೆಗೆ ನೀಡಿದ್ದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಾ ನುಡಿದಂತೆ ನಡೆದಿದ್ದೇನೆ ನನ್ನ ಆಡಳಿತದ ಸಂದರ್ಭದಲ್ಲಿ ಯಾವುದೇ ರೀತಿಯ ಲೋಕಗಳಿದ್ದರೂ ಸಾರ್ವಜನಿಕರು ತಿಳಿಸಿದಲ್ಲಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು. ಗ್ರಾಮೀಣ ಮತ್ತು ನಗರ ಪ್ರದೇಶ ಎರಡಕ್ಕೂ ಮೂಲಭೂತ ಸವಲತ್ತುಗಳನ್ನು ನೀಡುವ ಸಲುವಾಗಿ ಪ್ರತಿ ಅಧಿವೇಶನದಲ್ಲೂ ಕೂಡ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಯಶಸ್ವಿಯಾಗಿದ್ದೇನೆ ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಸಾವಿರದ ಮುನ್ನೂರು ನಿವೇಶನಗಳನ್ನು ನಿರ್ಗತಿಕರಿಗೆ ಹಂಚಿಕೆ ಮಾಡಿದ್ದೆ ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯವರೆಗೂ ಇತರೆ ಯಾರು ಕೂಡ ನಿರ್ಗತಿಕರಿಗೆ ನಿವೇಶನವನ್ನು ನೀಡಿಲ್ಲ ಇದನ್ನು ಪಟ್ಟಣದ ಜನತೆ ಅರ್ಥಮಾಡಿಕೊಳ್ಳಬೇಕು ಈ ಹಿಂದೆ ಆಡಳಿತ ನಡೆಸಿದ ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರ ಕೈಗೆ ದೊರೆಯದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಂಡು ಮತಯಾಚನೆ ಮಾಡುತ್ತಿದ್ದರು ಇಂಥ ನೀಚರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತಾಲೂಕಿನಾದ್ಯಂತ ತಿರುಗುತ್ತಿರುವುದಕ್ಕೆ ನಾಚಿಕೆ ಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಶಾಸಕನಾಗಿ ಆಯ್ಕೆಯಾಗಿ ತಾಲೂಕಿನ ಅಭಿವೃದ್ಧಿ ಮಾಡಲು ಸಹಕರಿಸಿದ ಪ್ರತಿಯೊಬ್ಬ ಮತದಾರರಿಗೂ ಕೂಡ ಋಣಿಯಾಗಿದ್ದು ನಿಮ್ಮ ಋಣವನ್ನು ಎಂದಿಗೂ ಮರೆಯುವುದಿಲ್ಲ ಪಟ್ಟಣದ ಜನತೆಗೆ ಕುಡಿಯುವ ಕಾವೇರಿ ನೀರಿನ ಸಂಪರ್ಕ ಒಳಚರಂಡಿ ವ್ಯವಸ್ಥೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕಿಂಡರ್ ಸ್ಥಾಪನೆ ಸಿಗುದಂತೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ತಾಲೂಕಿನಲ್ಲಿ ಮಾಡಿದ್ದೇನೆ ಇಂಥ ಅಭಿವೃದ್ಧಿ ಕಾರ್ಯಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ನನ್ನನ್ನು ಪ್ರಶ್ನಿಸುವ ಯೋಗ್ಯತೆಯಾಗಲಿ ಸಾಮರ್ಥ್ಯವಾಗಲಿ ನನ್ನ ವಿರೋಧಿಗಳಿಗೆ ಇಲ್ಲ ಎಂದರಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣದ ಜನತೆ ಹೆಚ್ಚಿನ ಮತ ನೀಡಿ ನನಗೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲು ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದರು.
ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ಮಾತನಾಡಿ ತಾಲೂಕಿನ ಶಾಸಕರಾಗಿ ಅಧಿಕಾರ ನೀಡಿದ ಮೇಲೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ರಾಜಕಾರಣದ ಸಾರ್ಥಕತೆಯನ್ನು ಮಹದೇವಣ್ಣ ಮೆರೆದಿದ್ದಾರೆ ಇತರೆ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮಾಡಿದ ಅಪಮಾನ ಅವಮಾನಗಳ ವಿರುದ್ಧ ನಾವು ಪ್ರತಿ ಚುನಾವಣೆಯಲ್ಲಿ ಹೋರಾಟ ಮಾಡಿ ಅಧಿಕಾರವನ್ನು ಹಿಡಿದಿದ್ದೇವೆ. ಇದಕ್ಕೆಲ್ಲ ನಿಷ್ಠಾವಂತ ಕಾರ್ಯಕರ್ತರ ಬಲವೇ ಕಾರಣ ನಮ್ಮ ರಾಜಕಾರಣದ ಹಾದಿಯು ಮುಳ್ಳಿನ ಹಾಸಿಗೆ ಅಂತಿದ್ದು ಇಂತಹ ಹಾದಿ ಯಾವುದೇ ಕಾರ್ಯಕರ್ತರಿಗೂ ಬೇಡ ಎಷ್ಟೇ ನೋವು ಇದ್ದರೂ ಕೂಡ ಪಕ್ಷದ ಕಾರ್ಯಕರ್ತರ ಉಳಿವಿಗಾಗಿ ಮತ್ತು ತಾಲೂಕಿನ ಅಭಿವೃದ್ಧಿಯನ್ನು ಮಾಡಲು ಚುನಾವಣೆಯನ್ನು ಎದುರಿಸುತ್ತಿದ್ದೇವೆ ಹಾಗೂ ಮಹದೇವಣ್ಣನವರ ಕೊನೆಯ ಚುನಾವಣೆ ಕೂಡ ಇದಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹದೇವಣ್ಣನವರಿಗೆ ಮತವನ್ನು ನೀಡುವುದರ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೆ ಮಹೇಶ್ ಸದಸ್ಯರಾದ ಮಂಜುನಾಥ್ ಸಿಂಗ್ ಪಿ ಶ್ರೀ ಕೃಷ್ಣ ವಿನೋದ್ ಭಾರತಿ ಪುಷ್ಪ ಪ್ರಕಾಶ್ ಸಿಂಗ್ ನಿರಂಜನ್ ಮುಖಂಡರಾದ ಅಣ್ಣಯ್ಯ ಜಾಕಿ ಸುರೇಶ್ ಕುಮಾರ್ ವಾಸು ಮೋಹನ್ ಯಾದವ್ ಸಿಎನ್ ರವಿ ಪೆಪ್ಸಿ ಕುಮಾರ್ ತಿಮ್ಮ ನಾಯಕ ಎಟಿ ರಂಗಸ್ವಾಮಿ ಸಾಜಿದ ಭಾನು ಜಿ ಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top