ನಾನು ಶಾಸಕನಾದ ಮೇಲೆ ನಿಮ್ಮ ಗ್ರಾಮಗಳಿಗೆ ಮಾಡಿರುವ ಕೆಲಸಗಳು ನಿಮ್ಮ ಮನಸ್ಸುಗಳಿಗೆ ತೃಪ್ತಿಯಾಗಿದ್ದರೆ ಮಾತ್ರ ಮುಂಬರುವ ಚುನಾವಣೆಯಲ್ಲಿ ನಿಮ್ಮ ಮತಗಳನ್ನು ನನಗೆ ನೀಡಿ ಮತ್ತೊಮ್ಮೆ ನಿಮ್ಮ ಸೇವೆಗಳನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ಶಾಸಕ ಕೆ ಮಹದೇವ್ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟು ಮತ್ತು ಮುತ್ತಿನ ಮುಳ್ಸೋಗೆ ಗ್ರಾಮದಲ್ಲಿ 1.2 0 ಕೋಟಿರು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಬಾರಿ ಚುನಾವಣೆಯಲ್ಲಿ ಮುಳುಸೋಗಿ ಗ್ರಾಮದ ಜನರು ನನಗೆ ಹೆಚ್ಚು ಮತ ಕೊಟ್ಟಿದ್ದು ಪರಿಪೂರ್ಣವಾಗಿ ಈ ಗ್ರಾಮಕ್ಕೆ ಸುಮಾರು 3.60 ಕೋಟಿ ಅನುದಾನವನ್ನು ನೀಡಿದ್ದು ಪ್ರತಿಯೊಬ್ಬರು ಯಾವುದೇ ಗಲಾಟೆ ಗಲಭೆಗಳಿಗೆ ಅವಕಾಶ ನೀಡದಂತೆ ಗ್ರಾಮದ ಅಭಿವೃದ್ಧಿಯನ್ನು ಸಮನ್ವಯತೆಯಿಂದ ತೆಗೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ಸ್ವಾಮಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪರಶಿವಮೂರ್ತಿ ಚಂದ್ರಶೇಖರ್ ಎ ಇಇ ವೆಂಕಟೇಶ್ ಮತ್ತಿತರರು ಹಾಜರಿದ್ದರು.