ಪಿರಿಯಾಪಟ್ಟಣ: ತಾಲೂಕಿನ ವಿವಿದೆಡೆ 30 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣ ಹಾಗೂ 90 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ಈ ವೇಳೆ ಭೂತನಹಳ್ಳಿ, ಸುಂಕದಹಳ್ಳಿ, ದಿಂಡಗಾಡು, ಗಂಗನಕುಪ್ಪೆ, ಚಪ್ಪರದಹಳ್ಳಿ, ವಡೇರಹೊಸಹಳ್ಳಿ ಗ್ರಾಮದಲ್ಲಿ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
ತಾಲ್ಲೂಕಿನ ಬೂತನಹಳ್ಳಿ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನಾನು 40ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ 30 ವರ್ಷ ಅಧಿಕಾರದಲ್ಲಿದ್ದೆ ಎಂದು ಶಾಸಕನಾಗಿದ್ದೆ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವವರಿಗೆ ಜನಗಳು ನಾನು ಕೆಲಸ ಮಾಡುತ್ತಿದ್ದೇನೆ ಎಂದು ಮನವರಿಕೆಯಾಗಿರಬೇಕು ಬೇಕು ಎಂದು ತಿಳಿಸಿದರು. ಆ ಪುಣ್ಯಾತ್ಮ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ತಾಲ್ಲೂಕಿನ ಅಭಿವೃದ್ಧಿ ಮತ್ತೆ ಹಿನ್ನಡೆ ಆಗಲಿದೆ ಎಂದರು. ಈಗಲೂ ಶಾಲಾ ಕೊಠಡಿಗಳು ಇಲ್ಲ, ರಸ್ತೆ ಸರಿ ಇಲ್ಲ, ವಿದ್ಯುತ್ ಸಮಸ್ಯೆ ಕಾಡುತ್ತಿದೆ, ಚರಂಡಿ ಮಾಡಿಸಿಕೊಡಿ ಎಂದು ಜನಗಳು ನನ್ನ ಬಳಿಗೆ ಬರುತ್ತಿರುವುದನ್ನು ನೋಡಿದರೆ ಜನರು ಕಾಂಗ್ರೆಸ್ಸಿಗೆ ವೋಟ್ ಕೊಟ್ಟು ಈ ದೇಶ ಹಾಳಾಗಲು ಕಾರಣರಾಗಿದ್ದಾರೆ ಎನ್ನದೆ ಬೇರೆ ದಾರಿ ಇಲ್ಲ ಎಂದು ತಿಳಿಸಿದರು. ರಾಜಕೀಯ ದ್ವೇಷದ ವಾತಾವರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆಡಳಿತ ಪಕ್ಷದಲ್ಲಿರುವ ಶಾಸಕರಿಗೆ ಮಾತ್ರ ಅನುದಾನ ನೀಡುವ ಕೆಲಸವಾಗುತ್ತಿದೆ ಆದರೆ ನಾನು ಶಾಸಕನೆಂಬ ಹಮ್ಮು ಬಿಮ್ಮು ಬಿಟ್ಟು ಅಧಿಕಾರಿಗಳು ಮತ್ತು ಮಂತ್ರಿಗಳ ಬೆನ್ನು ಬಿದ್ದು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಪಡಿಸುತ್ತಿದ್ದೇನೆ ಜನಪ್ರತಿನಿಧಿ ಆದವರಿಗೆ ಕ್ಷೇತ್ರದ ಬಗ್ಗೆ ಕಳಕಳಿ ಇದ್ದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ, ಜೆಡಿಎಸ್ ಮುಖಂಡರಾದ ರಾಜೇಗೌಡ, ಎ. ಟಿ. ರಂಗಸ್ವಾಮಿ ಮಾತನಾಡಿದರು.
ತಾಪಂ ಮಾಜಿ ಸದಸ್ಯ ಎಸ್.ರಾಮು, ಗ್ರಾ.ಪಂ. ಅಧ್ಯಕ್ಷ ಜ್ಯೋತಿ, ಉಪಾಧ್ಯಕ್ಷ ನಂಜಪ್ಪ, ಸದಸ್ಯರಾದ ರವಿ, ಚೆಲುವರಾಜು, ಹುಚ್ಚಮ್ಮ, ಮಂಜುಳಾ, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ್, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ನವೀನ್, ಗ್ರಾಮಸ್ಥರಾದ ಪುಟ್ಟಸ್ವಾಮಿಗೌಡ, ಗೋವಿಂದೇಗೌಡ, ಮುಖ್ಯ ಶಿಕ್ಷಕ ಮಹೇಶ್ ಹಾಜರಿದ್ದರು.