ಪಿರಿಯಾಪಟ್ಟಣ: ಜನಪ್ರತಿನಿಧಿಯಾದವರಿಗೆ ಕ್ಷೇತ್ರದ ಬಗ್ಗೆ ಕಳಕಳಿ ಇದ್ದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಬೂತನಹಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ನಾನು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ 30 ವರ್ಷ ಅಧಿಕಾರದಲ್ಲಿದ್ದೆ ಎಂಬುದೆ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಮಾಜಿ ಶಾಸಕರು ಅವರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಮನಸ್ಸು ಮಾಡಿರಲಿಲ್ಲ, ಸಾರ್ವಜನಿಕರಿಗೆ ನನ್ನ ಅವಧಿಯ ಜನಪರ ಕೆಲಸಗಳು ಮನವರಿಕೆಯಾಗುತ್ತಿದೆ, ನಾನು ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಹೋದಡೆಯಲ್ಲ ನಾಗರಿಕರು ಹೇಳುತ್ತಿರುವುದು ನನ್ನ ಕೆಲಸಕ್ಕೆ ಆತ್ಮತೃಪ್ತಿ ತಂದಿದೆ, ಶಾಲಾ ಕೊಠಡಿ ರಸ್ತೆ ಚರಂಡಿ ನಿರ್ಮಾಣ ಸೇರಿದಂತೆ ವಿದ್ಯುತ್ ಹಾಗೂ ಇತರೆ ಮೂಲಭೂತ ಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಚುನಾಯಿಸುವ, ಪ್ರತಿನಿತ್ಯ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ನನ್ನ ಬಳಿಗೆ ಬರುತ್ತಿರುವುದನ್ನು ನೋಡಿದರೆ ಜನರು ಕಾಂಗ್ರೆಸ್ಸಿಗೆ ವೋಟ್ ಕೊಟ್ಟು ಈ ದೇಶ ಹಾಳಾಗಲು ಕಾರಣರಾಗಿದ್ದಾರೆ ಎನ್ನದೆ ಬೇರೆ ದಾರಿ ಇಲ್ಲ, ರಾಜಕೀಯ ದ್ವೇಷದ ವಾತಾವರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆಡಳಿತ ಪಕ್ಷದಲ್ಲಿರುವ ಶಾಸಕರಿಗೆ ಮಾತ್ರ ಅನುದಾನ ನೀಡುವ ಕೆಲಸವಾಗುತ್ತಿದೆ ಆದರೆ ನಾನು ಶಾಸಕನೆಂಬ ಹಮ್ಮು ಬಿಮ್ಮು ಬಿಟ್ಟು ಅಧಿಕಾರಿಗಳು ಮತ್ತು ಮಂತ್ರಿಗಳ ಬೆನ್ನು ಬಿದ್ದು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ ಎಂದರು.
ಈ ಸಂದರ್ಭ ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಮುಖಂಡರಾದ ರಾಜೇಗೌಡ, ಎ.ಟಿ ರಂಗಸ್ವಾಮಿ, ಜಲೇಂದ್ರ, ಅಶೋಕ್, ತಾ.ಪಂ ಮಾಜಿ ಸದಸ್ಯ ಎಸ್.ರಾಮು, ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ನಂಜಪ್ಪ, ಸದಸ್ಯರಾದ ರವಿ, ಚೆಲುವರಾಜು, ಹುಚ್ಚಮ್ಮ, ಮಂಜುಳಾ,
ಎಸ್ ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ನವೀನ್, ಗ್ರಾಮಸ್ಥರಾದ ಪುಟ್ಟಸ್ವಾಮಿಗೌಡ, ಗೋವಿಂದೇಗೌಡ, ಮುಖ್ಯ ಶಿಕ್ಷಕ ಮಹೇಶ್ ಇದ್ದರು.