ಈ ವೇಳೆ ಪಂಚವಳ್ಳಿ ಗ್ರಾಮದಲ್ಲಿ ಮಾತನಾಡಿದ ಶಾಸಕರು ನಾನು ತಾಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಕೂಲಿಯಾಗಿ ಮುಂಬರುವ ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿ ಗೆಲ್ಲಿಸಿ, ರಸ್ತೆ ಚರಂಡಿ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇತರೆ ಸಮಸ್ಯೆಗಳ ಸಂಬಂಧ ಸಾರ್ವಜನಿಕರು ನೀಡುವ ಅರ್ಜಿಯನ್ನು ಒಂದೇ ಬಾರಿಗೆ ಈಡೇರಿಸದಿದ್ದರು ಹಂತ ಹಂತವಾಗಿ ಆದ್ಯತೆಗೆ ಅನುಸಾರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆಗಳ ಮೂಲಕ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ, ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳೀಯ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಿ ಬಹಳಷ್ಟು ವರ್ಷಗಳ ಕಾಲ ಬಾಳಿಕೆಗೆ ಬರುವಂತೆ ನಿಗಾ ವಹಿಸಬೇಕು, ಈ ಹಿಂದೆ ಶಾಸಕರಾಗಿ ಆಡಳಿತ ನಡೆಸಿದವರು ತಾಲೂಕಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ವಹಿಸಿದ್ದರಿಂದ ನಾನು ಯಾವುದೇ ಗ್ರಾಮಕ್ಕೆ ಭೇಟಿ ನೀಡಿದರು ಪ್ರತಿ ಗ್ರಾಮಗಳಲ್ಲೂ ಸಮಸ್ಯೆಗಳ ಅರ್ಜಿ ಹಿಡಿದು ಸಾರ್ವಜನಿಕರು ಪರಿಹಾರಕ್ಕೆ ಒತ್ತಾಯಿಸುತ್ತಾರೆ ಈ ಹಿಂದೆ ಆಡಳಿತ ನಡೆಸಿದವರನ್ನು ಜನರು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳದ ಕಾರಣ ಸಮಸ್ಯೆಗಳು ಹಾಗೆಯೇ ಉಳಿದಿವೆ, ಅಧಿಕಾರವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ ತೃಪ್ತಿ ಇದ್ದು ಮತ್ತಷ್ಟು ಉಳಿದ ಅಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಪಂಚವಳ್ಳಿ ಗ್ರಾಮದಲ್ಲಿ 35 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ 12 ಲಕ್ಷ ವೆಚ್ಚದ ಡಾ.ಬಾಬು ಜಗಜೀವನ ರಾಮ್ ನೂತನ ಭವನ ನಿರ್ಮಾಣ ಕಾಮಗಾರಿ, ಸತ್ಯಗಾಲ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 16.5 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಉದ್ಘಾಟನೆ ಮತ್ತು ಸತ್ಯಗಾಲ ಎ ಕಾವಲು ಗ್ರಾಮದಲ್ಲಿ 5 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ, ಬಸಲಾಪುರ ಗ್ರಾಮದಲ್ಲಿ 40 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಬೆಕ್ಯ ಗ್ರಾಮದಲ್ಲಿ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.