ತಾಲ್ಲೂಕಿನ ಆವರ್ತಿ ಗ್ರಾಮದಲ್ಲಿ 25 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲ್ಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿ ಒಂದೇ ಹಂತದಲ್ಲಿ ಅಸಾಧ್ಯ ಇದನ್ನು ಮನಗಂಡು ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳ ಮನವೊಲಿಸಿ ಅನುದಾನ ತಂದು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಮೊದಲ ಬಾರಿಗೆ ಶಾಸಕನಾದ ಅವಧಿ ಅಭಿವೃದ್ಧಿ ಕಾರ್ಯ ನೋಡಿ ವಿರೋಧಿಗಳಲ್ಲಿ ಈಗಾಗಲೇ ನಡುಕ ಹುಟ್ಟಿದ್ದು ನನ್ನ ವಿರುದ್ಧ ವ್ಯಾಪಕವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ, ಜನರಿಗೆ
ಸತ್ಯ ಅರಿಯುವ ಶಕ್ತಿಯಿದ್ದು ಮುಂದಿನ ದಿನಗಳಲ್ಲಿ ಅಪಪ್ರಚಾರದಲ್ಲಿ ತೊಡಗಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಅನುದಾನ ಕೇಳಿ ಪಡೆದರಷ್ಟೇ ಸಾಲದು ಅದು ಸದ್ಬಳಕೆಯಾಗಲು ಗುಣಮಟ್ಟದ ಕಾಮಗಾರಿ ನಡೆಸಲು ಸಾರ್ವಜನಿಕರು ನಿಗಾ ವಹಿಸಬೇಕು, ಅಧಿಕಾರಿಗಳು ಕಾಮಗಾರಿಗಳ ನಿರ್ವಹಣೆ ವೇಳೆ ನಿಗಾ ವಹಿಸಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.
ಈ ವೇಳೆ ಭಾರತಿನಗರ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಗ್ರಾಮ ಪರಿಮಿತ ರಸ್ತೆ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು, ಶಾಸಕರ ಅಭಿವೃದ್ಧಿ ಮನಗಂಡು ಗ್ರಾಮದ ಹಲವು ಮುಖಂಡರು ಹಾಗೂ ಯುವಕರು ಜೆಡಿಎಸ್ ಸೇರಿದರು, ಕೊಪ್ಪ ಗ್ರಾಮದ ಕಾವೇರಿ ಬಡಾವಣೆಯಲ್ಲಿ 25 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಚೆಸ್ಕಾಂ ಎಇಇ ಸುನಿಲ್ ಯಾದವ್, ಹಾರಂಗಿ ಇಲಾಖೆ ಎಇಇ ಎನ್.ಕೆ ನವೀನ್ ಕುಮಾರ್, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾ ಸ್ವಾಮಿ, ಸದಸ್ಯರಾದ ಸಿಂಧು, ಸುರೇಶ್, ಕೃಷ್ಣ, ಆವರ್ತಿ ಗ್ರಾ.ಪಂ ಸದಸ್ಯರಾದ ಮಂಜುನಾಥ್, ಮೋಹನ್ ಕುಮಾರ್, ಮುಖಂಡರಾದ ಸೋಮಶೇಖರ್, ರಂಗಸ್ವಾಮಿ, ಚಂದ್ರಶೇಖರ್, ಅಶೋಕ್, ಜಲೇಂದ್ರ, ದಿನೇಶ್, ಅಣ್ಣಯ್ಯ, ಅಂಬಲಾರೆ ಬಸವೇಗೌಡ, ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.