ಪಿರಿಯಾಪಟ್ಟಣ : ತಾಲೂಕಿನಲ್ಲಿ ರಾಜಕೀಯ ಘರ್ಷಣೆ ಉಂಟು ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್ ಪಕ್ಷದವರ ಮಾತಿಗೆ ಮರುಳಾಗಬೇಡಿ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆ ಇನ್ನು ಕೇವಲ ಮೂರು ತಿಂಗಳು ಮಾತ್ರ ಇದ್ದು ಈ ಚುನಾವಣೆಯಲ್ಲಿ ಎಲ್ಲರೂ ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಹೋರಾಡಿ ಅದೇ ರೀತಿ ಜೆಡಿಎಸ್ ನ ಕೋಟೆಗಳಿಗೆ ಶತ್ರುಗಳು ಲಗ್ಗೆ ಇಡುವ ಸಾಧ್ಯತೆಯಿದ್ದು ಯಾವುದೇ ಕಾರಣದಿಂದಲೂ ಶತ್ರುಗಳಿಗೆ ಹೆದರದೆ ಹೋರಾಟ ನಡೆಸಬೇಕು ಹಾಗೂ ಈ ತಾಲೂಕಿನಲ್ಲಿ ಸಾವಿರಾರು ಕೋಟಿ ರೂ ಅಭಿವೃದ್ಧಿ ಕಾರ್ಯ ಮಾಡಿದ್ದು ಅದು ನನ್ನ ಹಣವೆಂದು ಅಪಪ್ರಚಾರ ಮಾಡುತ್ತಿರುವ ಮಾಜಿ ಶಾಸಕರು ಜನರ ತಲೆಕೆಡಿಸುತ್ತಿದ್ದಾರೆ ಅವರ ಮಾತಿಗೆ ಕಿವಿ ಕೊಡಬೇಡಿ ಎಂದು ತಿಳಿಸಿದರು. ಯಾವುದೇ ಸರ್ಕಾರವು ಮಾರ್ಚ್ ಇಂದ ಮಾರ್ಚ್ ವರೆಗೆ ಬಿಡುಗಡೆ ಆದಂತಹ ಹಣವನ್ನು ವಾಪಸ್ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ ಅದೇ ರೀತಿ ಕೊರೋನಾ ಬಂದಂತಹ ಸಂದರ್ಭದಲ್ಲಿ ಯಾವುದೇ ಹಣವನ್ನು ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ನೀಡಿಲ್ಲ ಇದನ್ನು ಅರಿತುಕೊಳ್ಳದೆ ಅಪರಾಚಾರದಲ್ಲಿ ತೊಡಗಿರುವುದು ಅನಾಗರಿಕರ ವರ್ತನೆ ಎಂದು ಮಾಜಿ ಶಾಸಕನ ವಿರುದ್ಧ ಗುಡುಗಿದರು ಕಾರ್ಯಕರ್ತರು ನನ್ನ ಕಷ್ಟದ ದಿನಗಳಲ್ಲಿ ತಾಲೂಕಿನ ಜನತೆ ನನ್ನ ಕೈ ಹಿಡಿದಿದ್ದು ನಾನು ಅದರ ಪ್ರತಿಫಲವಾಗಿ ಬಿಜೆಪಿ ಪಕ್ಷದ ಮಂತ್ರಿಗಳ ಕೈಕಾಲು ಹಿಡಿದು ತಾಲೂಕಿನ ಅಭಿವೃದ್ಧಿಗೆ ಹಣಕಾಸನ್ನು ತರುತ್ತಿದ್ದೇನೆ ಇದನ್ನ ಸಹಿಸದ ಮಾಜಿ ಶಾಸಕ ಕೆ ವೆಂಕಟೇಶ್ ನನ್ನ ಮತ್ತು ನನ್ನ ಮಗನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಇದನ್ನು ನಿಲ್ಲಿಸಿ ಒಳಸಂಚು ಮಾಡುವುದನ್ನು ಬಿಡಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ.
ಈ ವೇಳೆ ಮಾತನಾಡಿದ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಹಳ ಪ್ರಾಮಾಣಿಕರಾಗಿ ಯಾವುದೇ ಆಸೆ ಆಮಿಷಗಳಿಗೆ ಮರುಳಾಗದೆ ಸದೃಢರಾಗಿ ಪಕ್ಷದ ಪರವಾಗಿ ಹೋರಾಟ ನಡೆಸುತ್ತಿದ್ದು ಈ ಬಾರಿ ಕೆ.ಮಹದೇವ್ ರವರಿಗೆ ಅವಕಾಶ ನೀಡಿ ಶಾಸಕರಾಗಿ ಮಾಡಿದ್ದಲ್ಲಿ ತಾಲೂಕಿನ ಋಣ ತೀರಿಸುತ್ತೇವೆ ಎಂದರು. 30 ವರ್ಷಗಳು ದುರಾಡಳಿತ ನಡೆಸಿರುವ ಮಾಜಿ ಶಾಸಕ ಮತ್ತು ಪುತ್ರ ಚುನಾವಣೆ ಸಮೀಪಿಸಿದಂತೆ 4 ವರ್ಷ ಕಳೆದ ನಂತರ ಹಳ್ಳಿಹಳ್ಳಿ ಸುತ್ತಿ ಮತದಾರರಿಗೆ ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದು ನನ್ನನ್ನು ನೆನೆಸಿಕೊಳ್ಳುದಿದ್ದರೆ ಮಾಜಿ ಶಾಸಕರಿಗೆ ನಿದ್ರೆ ಬರುವುದಿಲ್ಲ ಶಾಸಕ ಮತ್ತು ಪುತ್ರ ಹಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿಕೊಂಡು ತಿರುಗುತ್ತಿದ್ದಿರಿ . ದ್ವೇಷ ರಾಜಕಾರಣವನ್ನು ಬಿಟ್ಟು ಪ್ರೀತಿಯ ರಾಜಕಾರಣವನ್ನು ಮಾಡಿ ತಾವೇನಾದರೂ ಕಾರ್ಯಕರ್ತರಲ್ಲಿ ಮತ್ತು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸಿದಲ್ಲಿ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಶಾಸಕ ಕೆ ವೆಂಕಟೇಶ್ ಗೆ ಸವಾಲು ಎಸೆದರು.
ಜೆಡಿಎಸ್ ಮುಖಂಡ ಗಗನ್ ಮಾತನಾಡಿ ಅನಾವಶ್ಯಕವಾಗಿ ಶಾಸಕ ಮಹದೇವರನ್ನು ದುರುತಿದ್ದು ಮಾಜಿ ಶಾಸಕ ಕೆ ವೆಂಕಟೇಶ್ ಅಪಪ್ರಚಾರ ಮಾಡಿಕೊಂಡು ತಾಲೂಕಿನಲ್ಲಿ ಸುತ್ತಾಡುತ್ತಿದ್ದಾರೆ. ತಾಲೂಕಿನಲ್ಲಿ ಪ್ರತಿಯೊಬ್ಬರ ಕಷ್ಟ ಸುಖಗಳನ್ನ ನೇರವಾಗಿ ಗಮನಿಸುತ್ತಾ ಅವರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವಂತಹ ಜನಸಾಮಾನ್ಯ ರೊಂದಿಗೆ ಬೆರೆತು ಕೆಲಸ ಮಾಡುವ ಶಾಸಕರು ಸಿಗುವುದು ಸುಲಭದ ಮಾತಲ್ಲ ಈ ಬಾರಿ ಶಾಸಕಕ್ಕೆ ಮಾದೇವನ ಗೆಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ , ಪುರಸಭಾ ಅಧ್ಯಕ್ಷ ಮಹೇಶ್, ಎಂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ರವಿ, ಮಾಜಿ ತಾಪಂ ಉಪಾಧ್ಯಕ್ಷ ರಘುನಾಥ್, ತಾ.ಪಂ ಮಾಜಿ ಸದಸ್ಯ ರಾಮು, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, , ಟಿಏಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ , ಎ.ಟಿ ರಂಗಸ್ವಾಮಿ, ಲೋಕೇಶ್, ಅಯ್ಯರ್ ಗಿರೀಶ್, ಪ್ರೀತಿ ಅರಸ್ ‘ವಿದ್ಯಾಶಂಕರ್, ಸೇರಿದಂತೆ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರು ಇದ್ದರು.