ಪಿರಿಯಾಪಟ್ಟಣ : ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಶಾಸಕ ಕೆ. ಮಹದೇವರು ಅವಧಿಯಲ್ಲಿ ಆಗಿದೆ ಎಂದು ಜೆಡಿಎಸ್ ಮುಖಂಡ ಮಂಜು ಮಾಸ್ಟರ್ ಹೇಳಿದರು.
ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಸುಮಾರು ₹24.26 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಂದ ಹಿಡಿದು ಸಾಮಾನ್ಯ ಜನರು ಸಹ ಪ್ರತಿ ಮಾರ್ಚ್ ತಿಂಗಳ ಅಂತ್ಯದೊಳಗೆ ಅವರ ಆದಾಯ ಖರ್ಚು ವೆಚ್ಚಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಹೀಗಿರುವಾಗ ಮಾಜಿ ಶಾಸಕರು ನಾನು ತಂದಿರುವ ಅನುದಾನವನ್ನು ಈಗಿನ ಹಾಲಿ ಶಾಸಕರು ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ , ಇವರು ಕಳೆದ 30 ವರ್ಷದ ಆಡಳಿತ ನಡೆಸಿದ್ದಾರೆ, ಇವರಿಗೆ ಯಾವ ಅನುದಾನ ಎಲ್ಲಿಯವರೆಗೆ ಚಾಲನೆಯಲ್ಲಿ ಇರುತ್ತದೆ ಎಂಬ ಕಿಂಚಿತ್ತು ಪ್ರಜ್ಞೆಯೂ ಇಲ್ಲವೇ ಎಂದು ಪ್ರಶ್ನೆ ಹಾಕಿದರು.
ಒಬ್ಬ ಶಾಸಕನಾದವನಿಗೆ ಕೆಲಸ ಮಾಡುವ ಮನಸ್ಥಿತಿ ಇದ್ದರೆ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಹೆಚ್ಚು ಅನುದಾನ ತಂದ ಶಾಸಕರ ಸಾಲಿಗೆ ಕೆ.ಮಹದೇವರವರು ನಿಲ್ಲುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಇನ್ನೂ ಎರಡು ಅವಧಿಯವರೆಗೂ ಕೆ.ಮಹದೇವ್ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇದೆ ವೇಳೆ ಕೌಲನಹಳ್ಳಿ, ಆನಿವಾಳು,ಹರದೂರು ಗ್ರಾಮಗಳಲ್ಲಿ ಸುಮಾರು ₹ 71 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಮುಖಂಡರಾದ ಅಣ್ಣಯ್ಯಶೆಟ್ಟಿ, ಮಂಜುನಾಥ್, ನಾರಾಯಣಗೌಡ, ವಿದ್ಯಾಶಂಕರ್,ಮಲ್ಲಿಕಾರ್ಜುನ್, ಸೋಮಶೇಖರ್ ,ಕರಡಿಪುರ ಕುಮಾರ್, ಸ್ವಾಮಿಗೌಡ, ಹರೀಶ್, ವಸಂತ್, ಪುನೀತ್,ಗಣೇಶ್, ಹಾರಂಗಿ ಇಲಾಖೆ ಅಧಿಕಾರಿ ನವೀನ್, ಸುಂದರೇಶ್ ಇದ್ದರು.