ಪಡಿತರ ಪದಾರ್ಥಗಳ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಮಾಲೀಕರು ನೋಡಿಕೊಳ್ಳಬೇಕು ಎಂದು ಶಾಸಕ ಕೆ ಮಹದೇವ ಸೂಚಿಸಿದರು.
ತಾಲೂಕಿನ ಮಂಚದೇವನಹಳ್ಳಿ ಗ್ರಾಮದಲ್ಲಿ ಪಡಿತರ ಪದಾರ್ಥಗಳ ವಿತರಣೆ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಪಡಿತರ ಪದಾರ್ಥಗಳನ್ನು ತೆಗೆದುಕೊಂಡು ಬರಲು ಗ್ರಾಮಸ್ಥರು ಸಾಕಷ್ಟು ದೂರ ಪ್ರಯಾಣ ಮಾಡಬೇಕಾದಂತ ಮತ್ತು ಒಂದು ದಿನದ ಸಮಯ ವ್ಯರ್ಥವಾಗುತ್ತಿದ್ದ ಸನ್ನಿವೇಶಗಳನ್ನು ನಾನು ಅರಿತಿದ್ದೇನೆ ಈ ಕಾರಣದಿಂದ ಸ್ಥಳೀಯವಾಗಿಯೇ ಅವರಿಗೆ ಪಡಿತರ ಪದಾರ್ಥಗಳು ದೊರಕುವಂತೆ ಮಾಡಲು ಉಪ ಕೇಂದ್ರಗಳನ್ನು ತೆರೆದು ಸಹಕರಿಸುತ್ತಿದ್ದೇನೆ. ತಾಲೂಕಿನಾದ್ಯಂತ ಈಗಾಗಲೇ 51 ಪಡಿತರ ವಿತರಣೆಯ ಉಪ ಕೇಂದ್ರಗಳನ್ನು ತೆರೆದಿದ್ದು ಈ ಮೂಲಕ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಪಡಿತರ ಪದಾರ್ಥಗಳು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಅಧಿಕಾರಿಗಳು ನಿಗ ವಹಿಸಬೇಕು ಇದರಲ್ಲಿ ಯಾವುದೇ ಲೋಪದೋಷ ವ್ಯಸಗಿದರು ಕೂಡ ನಿರ್ದಕ್ಷಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಸೂಚಿಸಿದರು.
ಆಹಾರ ಇಲಾಖೆ ಸಿರಸ್ತೆದಾರ್ ಸಣ್ಣ ಸ್ವಾಮಿ ಮಾತನಾಡಿ ಮಂಚದೇವನಹಳ್ಳಿ ಪಡಿತರ ಪದಾರ್ಥಗಳ ವಿತರಣೆಯ ಉಪ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಪಡಿತರ ಕಾರ್ಡುಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಿದ್ದಾರೆ. ಇವರಿಗೆ ಅನುಕೂಲವಾಗುವ ರೀತಿಯಲ್ಲಿ ಪಡಿತರ ಪದಾರ್ಥಗಳನ್ನು ವಿತರಿಸಲು ಇಲಾಖೆಯೂ ಶ್ರಮಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಚೆಲುವಯ್ಯ, ಮುಖಂಡರಾದ ಸುರೇಶ್, ವಿಜಯಕುಮಾರ್, ಸಿದ್ದ ನಾಯಕ, ಲಕ್ಷ್ಮಮ್ಮ ಜಯಮ್ಮ ನಾರಾಯಣ ನಾಯಕ ವೆಂಕಟೇಶ್ ಚಂದ್ರು ಬಸವರಾಜು ಸುನಿಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೋರೇಗೌಡ ಹಾಜರಿದ್ದರು.