ಪಿರಿಯಾಪಟ್ಟಣ: ಸಂವಿಧಾನದ ಆಶಯದ ಮೂಲಕ ಮೀಸಲಾತಿ ನೀಡಿ ಪ್ರತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರವರ ಆಡಳಿತ ಸರ್ಕಾರ ಎಂದು ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ತಿಳಿಸಿದರು.
ತಾಲೂಕಿನ ಸುಂಕದಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆವರ್ತಿ ಮತ್ತು ಚನಕಲ್ಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟನೆ ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರು ಆಡಳಿತ ಸಂದರ್ಭದಲ್ಲಿ ಪ್ರತಿ ಸಮುದಾಯಕ್ಕೂ ಸಮಾನ ಅವಕಾಶಗಳನ್ನು ಕಲ್ಪಿಸಿ ಸಂವಿಧಾನದ ಆಶಯಗಳನ್ನು ಹಿಡೇರಿಸಲು ಶ್ರಮಿಸಿದ ಮಹನೀಯರಾಗಿದ್ದಾರೆ.ಆಡಳಿತದ ಅವಧಿಯಲ್ಲಿ ನೀರಾವರಿ ಯೋಜನೆ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿ ರಾಜಕೀಯ ಸ್ಥಾನ ಮಾನ ನೀಡಿದರು.ಎಚ್. ಡಿ ಕುಮಾರ ಸ್ವಾಮಿ ರವರು ಮುಖಮಂತ್ರಿಯಾದ ತಕ್ಷಣ ರೈತರ ಸಾಲ ಮನ್ನಾ ಮಾಡಲು ಸಹಿ ಹಾಕಿದರು. ಜನಪರ ಯೋಜನೆಗಳನ್ನು ಜಾರಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಈ ಅಭಿವೃದ್ಧಿ ಯೋಜನೆಗಳನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು.ಪಂಚರತ್ನ ಯಾತ್ರೆಗೆ ಇಡೀ ರಾಜ್ಯದಲ್ಲಿ ಉತ್ತಮ ಬೆಂಬಲ ದೊರೆತಿದೆ. ನಿರುದ್ಯೋಗ ನಿರ್ಮೂಲನೆ,ರೈತರ ಪರವಾದ ಯೋಜನೆ,ಉತ್ತಮ ಶಿಕ್ಷಣ, ಆರೋಗ್ಯ ಸುಧಾರಣೆ, ಮಹಿಳಾ ಸಬಲೀಕರಣ ಸೇರಿದಂತ್ತೆ ರಾಜ್ಯದ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುಂತ್ತೆ ಜೆಡಿಎಸ್ ಪಕ್ಷ ಉದ್ದೇಶವನ್ನು ಹೊಂದಿದೆ.
ಬಿಜೆಪಿ ಪಕ್ಷ ಧರ್ಮ ಧರ್ಮಗಳ ನಡುವೆ ಸಂಘರ್ಷ ಮೂಡಿಸಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸದಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿ ಪ್ರತಿಯೊಬ್ಬರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡಿದ್ದಾರೆ ಇದರಿಂದಾಗಿ ಜನರು ಇಂತಹ ಕೆಟ್ಟ ಸರ್ಕಾರದ ಜನ ವಿರೋಧಿ ನೀತಿಗಳನ್ನು ಕಿತ್ತೊಗೆಯಲು ಸಿದ್ದರಾಗಬೇಕು ಎಂದರು.
ತಾಲ್ಲೂಕಿನ ಅಭಿವೃದ್ಧಿಗೆ ಶಾಸಕ ಕೆ. ಮಹದೇವ್ ರವರು ಸಾವಿರಾರು ಕೋಟಿ ರೂ ಗಳನ್ನು ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ಮಹದೇವ್ ಇದ್ದಾರೆ. ಆದ್ದರಿಂದ ನಿಮ್ಮ ತಾಲ್ಲೂಕಿನ ಅಭಿವೃದ್ಧಿಗೆ ಕೆ. ಮಹದೇವ್ ರವರನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿ ಕೊಡಿ ಕುಮಾರ್ ಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಈಗಾಗಲೇ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದವರು ಹಣದ ಆಮಿಷವನ್ನು ಒಡ್ದುತ್ತಿರುವ ಬಗ್ಗೆ ಮಾಹಿತಿ ಇದ್ದು ಯಾರು ಕೂಡ ಅವರ ಆಮಿಷಗಳಿಗೆ ಒಳಗಾಗಬೇಡಿ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಅವರು ಇಲ್ಲಸಲ್ಲದ ಆರೋಪ ಮಾಡುತ್ತಾ ತಿರುಗುತ್ತಿದ್ದಾರೆ. ಈ ಆರೋಪಗಳಿಗೆ ಯಾರು ಕಿವಿಗೋಡದೆ ಜೆಡಿಎಸ್ ಪಕ್ಷದ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು.ತಾಲ್ಲೂಕು ಅಭಿವೃದ್ಧಿಗೆ ಶ್ರಮೀಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಆವರಣದಿಂದ ಸಾವಿರಾರು ಸಂಖ್ಯೆಯಲ್ಲಿ ಬೈಕ್ ಸವರಾರು ಆವರ್ತಿ ಮತ್ತು ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ರ್ಯಾಲಿ ನಡೆಸಿ ಸುಂಕದಳ್ಳಿ ಗ್ರಾಮದಲ್ಲಿ ಸಮಾವೇಶಗೊಂಡರು.
ಮಾಜಿ ತಾ ಪಂ ಸದಸ್ಯ ಐಲಾಪುರ ರಾಮು,ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ,ಕೃಷ್ಣಪ್ಪ, ಹೇಮಂತ್ ಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂ ಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ,ಉಪಾಧ್ಯಕ್ಷ ಜಲೆಂದ್ರ, ಸದಸ್ಯೆ ಸುನೀತಾ,ಮಾಜಿ ತಾ ಪಂ ಸದಸ್ಯ ಮಲ್ಲಿಕಾರ್ಜುನ, ರಂಗಸ್ವಾಮಿ,ಮೋಹನ್ ರಾಜ್, ಜಯಂತಿ ಸೋಮಶೇಖರ್,ಗ್ರಾ ಪಂ ಅಧ್ಯಕ್ಷ ರೇಣುಕಾ ಸ್ವಾಮಿ,ಸದಸ್ಯ ಮಂಜು,ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ,ಮುಖಂಡರಾದ ಪರಮಶಿವಯ್ಯ, ಚಂದ್ರಶೇಖರ,ಅವರ್ತಿ ಸೋಮಶೇಖರ್,ಪೊನ್ನಡಳ್ಳಿ ಗಣೇಶ್,ಸುರೇಂದ್ರ,ವಿದ್ಯಾಶಂಕರ್, ಕುಮಾರ್ ಕರಡಿಪುರ,ಪ್ರೀತಿ ಅರಸ್,ಚಂದ್ರ ಶೇಖರಯ್ಯ ಸೇರಿದಂತ್ತೆ ಮತ್ತಿತರರು ಹಾಜರಿದ್ದರು.