ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ 

ಪಿರಿಯಾಪಟ್ಟಣ :ಸರ್ಕಾರದ ಕಾರ್ಯಕ್ರಮಗಳು ಕೇವಲ ಪ್ರಚಾರ ಮತ್ತು ನಾಮಕಾವಸ್ಥೆಗೆ ಸೀಮಿತವಾಗದೆ ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಸಮೀಪದ ಹಲಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು. ಸಾರ್ವಜನಿಕರಿಗೆ ಸದುಪಯೋಗವಾಗಲೆಂದು ಸರ್ಕಾರ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಇದರಿಂದ ಸಾಕಷ್ಟು ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗಿದೆ. ಎಲ್ಲಾ ಅಧಿಕಾರಿ ವೃದ್ಧದವರು ಸಹ ಪ್ರತಿ ತಿಂಗಳು ಗ್ರಾಮಾಂತರ ಭಾಗದ ಸಮಸ್ಯೆಗಳನ್ನು ಆಲಿಸಲು ಇದು ಸಹಕಾರಿಯಾಗಿದೆ ಎಂದರು.

ಜನರಿಗೆ ಸರ್ಕರದ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನರಿಗೆ ತಿಳುವಳಿಕೆ ನೀಡಬೇಕು, ತಾಲ್ಲೂಕಿನ ರೈತರು ತಂಬಾಕಿನ ಜೊತೆ ಎರಡನೇ ಬೆಳೆಯಾಗಿ ರಾಗಿ ಬೆಳೆ ಅವಲಂಬಿತರಾಗಿದ್ದಾರೆ , ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ರೈತರು ಪರ್ಯಾಯ ಬೆಳೆ ಬೆಳೆಯಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್ ಯದುಗಿರೀಶ್ ಮಾತನಾಡಿ ಗ್ರಾಮದಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಇ.ಒ ಕೃಷ್ಣಕುಮಾರ್ ಮಾತನಾಡಿ ಗ್ರಾಮ ವೀಕ್ಷಣೆಯ ಸಂದರ್ಭದಲ್ಲಿ ಮನೆಯ ಮುಂದೆ ಸ್ವಚ್ಛತೆಗೆ, ಶಾಲಾ, ಕಾಲೇಜುಗಳು ಅಂಗನವಾಡಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ, ಗ್ರಾಮಸ್ಥರು ಸಮುದಾಯಕ್ಕೆ ಯಾವ ರೀತಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ವೀಕ್ಷಿಸಬಹುದಾಗಿದೆ ಎಂದರು.ಸರ್ಕಾರದ ನರೇಗಾ ಯೋಜನೆ ಮತ್ತು ವಿವಿದ ಇಲಾಖೆಗಳಿಂದ ಸಾರ್ವಜನಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ವಿವಿಧ ಮಂಜೂರಾತಿ ಪತ್ರ ವಿತರಣೆ: ಕಾರ್ಯಕ್ರಮದಲ್ಲಿ ವಿವಿದ ರೀತಿಯ ಪಿಂಚಿಣಿ ಯೋಜನೆಯ ಆದೇಶ ಪತ್ರ, ಮಳೆಯಲ್ಲಿ ಹಾನಿಗೊಳಗಾದ ಮನೆಗಳ ಹಣ ಮಂಜೂರಾತಿ ಪತ್ರಗಳನ್ನು ಶಾಸಕ ಕೆ.ಮಹದೇವ್ ಮತ್ತು ತಹಸೀಲ್ದಾರ್ ಯದುಗಿರೀಶ್ ವಿತರಣೆ ಮಾಡಿದರು.

 ಅಣ್ಣಯ್ಯಶೆಟ್ಟಿ, ವಿದ್ಯಾಶಂಕರ, ಅತ್ತಹರ್ ಮತಿನ್, ರವೀಗೌಡ, ಗೀತಾ ಮಹದೇವ್, ಷಫೀರ್ ಅಹಮ್ಮದ್,ನೂರ್ ಅಸ್ಮಾ, ಸನೋಬಿಯಾ, ಸೈಯದ್ ಹಸೀಬ್, ಕಂದಾಯ ನಿರೀಕ್ಷಕ ಆನಂದ್, ಸಹಾಯಕ ಕೃಷಿ ನಿರ್ಧೇಶಕ ಪ್ರಸಾದ್, ಬಿಇಒ ಬಸವರಾಜು, ಎಡಿಎಲ್‌ಆರ್ ಚಿಕ್ಕಣ್ಣ, ಆರ್‌ಎಫ್‌ಒ ಕಿರಣ್‌ಕುಮಾರ್, ಜಿ.ಪಂ. ಎಇಇ ಮಲ್ಲಿಕಾರ್ಜುನ್, ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ಧೇಶಕ ಸೋಮಯ್ಯ, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಜೀತೇಂದ್ರ, ಆಕಾಶ್,ಮುನಾಫ್, ಮಜಹರ್ ಪಾಶ ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top