ಪಿರಿಯಾಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಹಾಗು ತಹಸಿಲ್ದಾರ್ ಯದು ಗಿರೀಶ್ ಧ್ವಜವಂದನೆ ಸ್ವೀಕರಿಸಿದರು 

ಪಿರಿಯಾಪಟ್ಟಣ: ಸರ್ವ ಜನಾಂಗದವರು ಶಾಂತಿ ಸಹ ಬಾಳ್ವೆಯಿಂದ ಬಾಳಲು ಸಂವಿಧಾನ ಮೂಲ ಕಾರಣ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,  ಕೈಗಾರಿಕೋದ್ಯಮದಂತೆ ರೈತರ ಅಭಿವೃದ್ಧಿಗೆ ಒತ್ತು ನೀಡಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ,  ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಂಡು ಸರ್ವರ ಒಳಿತಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಬದುಕು ನಡೆಸಬೇಕು ಎಂದರು.

 ಪ್ರಧಾನ ಭಾಷಣಕಾರರಾಗಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಂ.ಸಿ ಪ್ರಶಾಂತ್ ಅವರು ಮಾತನಾಡಿ  ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಅವರ  ತಪಸ್ಸಿನಿಂದಾಗಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಭಾರತ ದೇಶದ್ದಾಗಿದೆ, ದೇಶದ ಸನಾತನ ಪರಂಪರೆ ಒಗ್ಗೂಡಿಸಿ ವಿದೇಶಗಳಲ್ಲಿನ ಒಳ್ಳೆಯ ವಿಷಯಗಳನ್ನು ಸಂಘಟಿಸಿ ದೇಶದ ಏಕತೆ ಹಾಗೂ ಸಮಾನತೆಯ ಪರಿಕಲ್ಪನೆಗಾಗಿ ಸಂವಿಧಾನ  ರಚಿಸಲಾಯಿತು ಅದನ್ನು  ಗೌರವಿಸಿ ಉಳಿಸಿ ಬೆಳೆಸುವುದು ಭಾರತೀಯರ ಮೊದಲ ಕರ್ತವ್ಯವಾಗಬೇಕಿದೆ ಎಂದರು.

ತಹಸೀಲ್ದಾರ್ ಯದು ಗಿರೀಶ್ ಅವರು ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು ಬಳಿಕ ಆರಕ್ಷಕ ಇಲಾಖೆ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು,ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ನೃತ್ಯ ಹಾಗೂ ಛದ್ಮವೇಷ ಗಮನ ಸೆಳೆಯಿತು, ಪುಷ್ಪ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ವೀರಯೋಧ ವಿಕ್ರಂ ಸಿಂಗ್ ಅವರ ಕಥಾ ನೃತ್ಯ ರೂಪಕ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು ಈ ವೇಳೆ ಶಾಸಕರು ಹಾಗೂ ಗಣ್ಯರು  ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು, ಸಮಾಜ ಕಲ್ಯಾಣ ತೋಟಗಾರಿಕೆ ಕಂದಾಯ ಮೀನುಗಾರಿಕೆ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಆಯ್ದ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭ ತಾಲ್ಲೂಕು ಪಂಚಾಯತಿ ಇಓ ಸಿ.ಆರ್ ಕೃಷ್ಣಕುಮಾರ್, ಬಿಇಓ ಬಸವರಾಜು, ಪೋಲಿಸ್ ನಿರೀಕ್ಷಕರಾದ ಕೆ.ವಿ ಶ್ರೀಧರ್, ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಬಿ.ಮಹೇಂದ್ರ, ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೇ ಪಿ.ಕೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ನಿರಂಜನ್, ವಿನೋದ್, ಪುಷ್ಪಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮೋಹನ್ ಕುಮಾರ್, ಟಿಏಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ  ಸಿ.ಏನ್ ರವಿ, ವಿವಿಧ ಇಲಾಖೆ ಮೇಲಧಿಕಾರಿಗಳಾದ ಎಂ.ಆರ್ ವೆಂಕಟೇಶ್, ಚಿಕ್ಕಣ್ಣ, ಡಾ.ಶರತ್ ಬಾಬು, ಮಲ್ಲಿಕಾರ್ಜುನ್, ಡಾ.ಸೋಮಯ್ಯ, ಮಮತಾ, ಎಂ.ಕೆ ಪ್ರಕಾಶ್, ರಘುಪತಿ, ಶಿರಸ್ತೆದಾರ್ ನಂದಕುಮಾರ್, ಟ್ರಿಜಾ, ತಾಲೂಕು ಆಡಳಿತ ಕಚೇರಿ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು,  ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top