ಪಿರಿಯಾಪಟ್ಟಣ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಪಂಚ ರತ್ನ ಯಾತ್ರೆ ಕಾರ್ಯಕ್ರಮವು ಯಶಸ್ವಿಯಾಗಿದ್ದು,ಎರಡು ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್ ಪಕ್ಷ ಮಾತ್ರ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ,ಉದ್ಯೋಗ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವಂತೆ ಎಂದರು.
ತಾಲೂಕಿನಲ್ಲಿ ಎರಡನೇ ಬೆಳೆಯಾಗಿ ರಾಗಿಯನ್ನು ಬೆಳೆದಿದ್ದಾರೆ, ಸರ್ಕಾರ ನಿಯಮಾನಸಾರ ದೊಡ್ಡ ರೈತರಿಗೆ ಇದರಿಂದ ವಂಚಿತರಾಗುತ್ತಿದ್ದು, ಅವರು ಬೆಳೆಯುವ ರಾಗಿಯ ಖರೀದಿಗೆ ಹೆಚ್ಚು ಒತ್ತು ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ದಸಂಸ ಮುಖಂಡ ಐಲಾಪುರ ರಾಮು ಮಾತನಾಡಿ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ಪಕ್ಷವು ಹಿಂದೆ ದಲಿತರನ್ನು ಮತಗಳಿಗಾಗಿ ಮಾತ್ರ ಬಳಸಿಕೊಂಡು, ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲಾ. ದಲಿತರ ಮತದಿಂದ ಸುಮಾರು 70 ವರ್ಷಗಳ ಆಡಳಿತ ಮಾಡಿದ್ದಾರೆ. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳು ಆಗುತ್ತಾರೆ ಎಂದು ರಾಷ್ಟೀಯ ಪಕ್ಷಗಳಿಗೆ ಭಯ ಸೃಷ್ಟಿಯಾಗಿದೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರ ಆಡಳಿತ ಬಯಸುತ್ತಿದ್ದಾರೆ. ತಾಲೂಕಿನ ಜನತೆ ಕೆ.ಮಹದೇವ್ ಅವರಿಗೆ ಆಶೀರ್ವಾದ ಮಾಡುವ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.
ಗೊರಹಳ್ಳಿ ಗ್ರಾಮಕ್ಕೆ ಶಾಸಕ ಕೆ.ಮಹದೇವ್ ಅವರು ಆಗಮಿಸುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಯಿತು. ಇದೆ ಗ್ರಾಮದ ಹಲವಾರು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಘಟಕದ ಪ್ರದಾನ ಕಾರ್ಯದರ್ಶಿ ವಿದ್ಯಾಶಂಕರ್, ಗ್ರಾ.ಪಂ ಸದಸ್ಯ ದೇವೇಗೌಡ, ಸೊಸೈಟಿ ಅಧ್ಯಕ್ಷ ಸೈಯದ್ ಹಸಿಬ್, ಮುಖಂಡರಾದ ಕರಡಿಪುರ ಕುಮಾರ್, ಸ್ವಾಮೀಗೌಡ, ರಂಗನಾಥ, ಜವರಯ್ಯ, ಸೈಯದ್ ಯುನಿಖಾನ್, ಚಾಮಣ್ಣ, ಹರೀಶ್, ಪುನೀತ್, ವಸಂತ್, ಸಂಜು, ಪ್ರದೀಪ್, ರಘು ಸೇರಿದಂತೆ ಇತರರು ಇದ್ದರು.