ಪಿರಿಯಾಪಟ್ಟಣ : ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಯಾರು ಅತೀ ಹೆಚ್ಚು ಕೆಲಸ ಮಾಡಿದ್ದಾರೆ ಅಂತವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಹಸುವಿನಕಾವಲು ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಅವರು, ನಿಷ್ಪಕ್ಷಪಾತವಾಗಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಸಮಾನವಾಗಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಎರಡು ಬಾರಿ ಸೋಲನ್ನು ಅನುಭವಿಸಿ ಮೂರನೇ ಬಾರಿ ಗೆಲುವು ಸಾಧಿಸಿದ ನಾನು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಸಂಬಂಧಪಟ್ಟ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿ, ಕೆಲಸ ಮಾಡಿಸಿದ್ದೇನೆ. ಇದನ್ನು ಮತದಾರರು ಅರಿತುಕೊಂಡು ಮುಂಬರುವ ಚುನಾವಣೆಯಲ್ಲಿ ಮಾಡಿರುವ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಇದೆ ವೇಳೆ ಸೀಗೆಕೊರೆ ಕಾವಲು ಗ್ರಾಮದಲ್ಲಿ 25,000 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಮೇಲ್ತೊಟ್ಟಿ ಕಾಮಗಾರಿ, ಸೀಗೆಕೊರೆ ಕಾವಲು ಗ್ರಾಮದಲ್ಲಿ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ರಾಶಿಮಂಟಿಕಾವಲು ಗ್ರಾಮದಲ್ಲಿ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ದೊಡ್ಡ ಹರವೆ ಗ್ರಾಮದಲ್ಲಿ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಚಿಕ್ಕನೇರಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶ್ರಿಪ್ ಷರೀಫ್, ಹಸುವಿನಕಾವಲು ಡೈರಿ ಅಧ್ಯಕ್ಷ ಮೈಲಾರಪ್ಪ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಅನಿಲ್, ಕುಶಾಲನಗರ ಹಾರಂಗಿ ಪುನರ್ವಸತಿ ಉಪವಿಭಾಗದ ಎಇಇ ಎನ್.ಕೆ ನವೀನ್ ಕುಮಾರ್, ಗ್ರಾಮಲೆಕ್ಕಧಿಕಾರಿ ದೀಪಕ್, ಮುಖಂಡರಾದ ಸುನಿಲ್, ಅಪ್ಪಾಜಿಗೌಡ, ರಾಮದಾಸ್, ಮಲ್ಲೇಶ್, ರಾಜು, ಪಿ.ಕೆ ವಿಜಯ್, ಚಂದ್ರ, ಮಾಳೆಗೌಡ, ಅಭಿಜಿತ್, ಸಿದ್ದರಾಮು, ನಜೀರ್ ಸೇರಿದಂತೆ ಇತರರು ಇದ್ದರು.