ಪಿರಿಯಾಪಟ್ಟಣ : ಅಭಿವೃದ್ಧಿ ಕಾಮಗಾರಿಯ ಬಗ್ಗೆ ಪ್ರಶ್ನಿಸುವವರಿಗೆ ಸೂಕ್ತ ಉತ್ತರ ನೀಡುವ ಮನೋಭಾವವನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಜನತೆಗೆ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿದ್ದೇನೆ. ಮಾಜಿ ಶಾಸಕರ ಕಾಲದ ಅವಧಿಯ ಅನುದಾನದಲ್ಲಿ ತಾಲೂಕಿನ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳಿಗೆ ಕಾರ್ಯಕರ್ತರು ಸೂಕ್ತ ಉತ್ತರ ನೀಡಲು ಮುಂದಾಗಬೇಕು. ನಾನು ಶಾಸಕನಾದ ನಂತರ ತಂದ್ದ ಅನುದಾನದಲ್ಲಿಯೇ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆ ಇದನ್ನು ಸಾಭೀತು ಮಾಡಲು ಸಿದ್ದನಿದ್ದೇನೆ.
ಈ ಹಿಂದೆ ಜೆಡಿಎಸ್ ನಲ್ಲಿದ್ದ ಮಾಜಿ ಶಾಸಕ ಕೆ.ವೆಂಕಟೇಶ್ ಅಧಿಕಾರಕ್ಕಾಗಿ ಹಣದ ಸೂಟ್ ಕೇಸ್ ಪಡೆದು ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ನೀಚರಿಂದ ನಾನು ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಕಿಡಿ ಕಾರಿದರು.ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು ಹಣಕ್ಕಾಗಿ ಪ್ರತಿ ತಿಂಗಳು ಪೀಡಿಸುತ್ತಿದ್ದರು. ಆದರೆ ನನ್ನ ಅವಧಿಯಲ್ಲಿ ನಿಷ್ಕಲ್ಮಶವಾಗಿ ಆಡಳಿತ ನಡೆಸಿದ್ದೇನೆ. ಈ ಬಗ್ಗೆ ದೇವಸ್ಥಾನದಲ್ಲಿಯೇ ಪ್ರಮಾಣಕ್ಕೆ ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಆದ್ದರಿಂದ ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಒಳಗಾಗದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರನ್ನು ಮನವೊಲಿಸಬೇಕು ಎಂದು ತಿಳಿಸಿದರು.
ಮೈಮುಲ್ ಜಿಲ್ಲಾ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ ಮಾಜಿ ಶಾಸಕ ಕೆ. ವೆಂಕಟೇಶ್ ಸೀಸನ್ ರಾಜಕಾರಣಿಯಾಗಿದ್ದಾರೆ. ಸಮಯಕ್ಕೆ ತಕ್ಕಂತೆ ರಾಜಕಾರಣ ಮಾಡುವ ಕುತಂತ್ರಿಯಾಗಿದ್ದಾರೆ. ಕಳೆದ ಐದು ವರ್ಷಗಳ ಕಾಲ ಮನೆಯಲ್ಲಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ತಾಲೂಕಿನದ್ಯಂತ ಸುಳ್ಳು ಅಪಪ್ರಚಾರ ಮಾಡುತ್ತಾ ತಿರುಗುತ್ತಿದ್ದಾರೆ. ಜೆಡಿಎಸ್ ಮುಕ್ತ ತಾಲ್ಲೂಕು ಮಾಡುವುದಾಗಿ ಕಾಂಗ್ರೆಸ್ ನವರು ಕನಸು ಕಾಣುತ್ತಿದ್ದಾರೆ.ಈ ಕನಸ್ಸು ನನಸಾಗುವುದಿಲ್ಲ.ಜೆಡಿಎಸ್ ಕಾರ್ಯಕರ್ತರು ಸ್ವಾಭಿಮಾನಿಗಳಾಗಿದ್ದು ಶಾಸಕ ಕೆ. ಮಹಾದೇವ್ ರವರ ಉತ್ತಮ ಆಡಳಿತವನ್ನು ಒಪ್ಪಿ ಇಂದು ತಾಲೂಕಿನಾದ್ಯಂತ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಇದನ್ನು ಕಂಡು ಕಾಂಗ್ರೇಸಿಗರು ಸೋಲಿನ ಹತಾಶೆಯಿಂದ ಮೈ ಪರಚಿಕೊಳ್ಳುತ್ತಿದ್ದಾರೆ. ಇದು ಮಹದೇವಣ್ಣ ರವರ ಕೊನೆ ಚುನಾವಣೆಯಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತವನ್ನು ನೀಡುವುದರ ಮೂಲಕ ಕಾರ್ಯಕರ್ತರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಸಮಾವೇಶದಲ್ಲಿ ಮಾಜಿ ಜಿ ಪಂ ಸದಸ್ಯ ಚಂದ್ರೇಶ್,ತಾ ಪಂ ಮಾಜಿ ಸದಸ್ಯ ರಾಮು ಐಲಾಪುರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾ ಪಂ ಅಧ್ಯಕ್ಷ ದೇವರಾಜು ಮಾತನಾಡಿದರು ಮತ್ತು ಭೀಮ್ ಆರ್ಮಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕೊಣಸೂರು ಗಿರೀಶ್, ಪ್ರಸನ್ನ, ರವಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೆ. ಮಹೇಶ್, ಎಂಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಸಿಎನ್ ರವಿ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ,ನಿರ್ದೇಶಕರಾದ ಸುನೀತಾ, ಮಾಜಿ ತಾ ಪಂ ಸದಸ್ಯ ಮಲ್ಲಿಕಾರ್ಜುನ, ರಘುನಾಥ್, ಮುಖಂಡರಾದ ಗಗನ್,ಪ್ರೀತಿಯ ಅರಸ್, ಕಂಪ್ಲಾಪುರ ಕುಮಾರ್, ಲಕ್ಷ್ಮಣ, ಹೇಮಂತ್ ಕುಮಾರ್,ವಕೀಲ ನಾಗರಾಜ್ ಸೇರಿದಂತ್ತೆ ಇತರರು ಹಾಜರಿದ್ದರು.