ಪಿರಿಯಾಪಟ್ಟಣ : ಪ್ರವರ್ಗ 2 ಎ ಸಮುದಾಯಕ್ಕೆ ವರ್ಗೀಕೃತ ಒಳ ಮೀಸಲಾತಿಯನ್ನು ಸರ್ಕಾರ ಜಾರಿಗೊಳಿಸಿದಾಗ ಮಾತ್ರ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಸಾಧ್ಯ ಎಂದು ಅರಕಲಗೂಡಿನ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ವಿಶ್ವಕರ್ಮ ಜಗದ್ಗುರು ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಒತ್ತಾಯಿಸಿದರು.
ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ನೂತನ ವಿಶ್ವಕರ್ಮ ಸೇವಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ವಿಶ್ವಕರ್ಮ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ಪ್ರವರ್ಗ 2ಎ ಗೆ ಸೇರಿದೆ ಆದ್ದರಿಂದ ಪ್ರವರ್ಗ 2a ಸಮುದಾಯವಕ್ಕೆ ವರ್ಗೀಕೃತ ಒಳ ಮೀಸಲಾತಿ ಕಲ್ಪಿಸಬೇಕು ಆಗ ಮಾತ್ರ ಈ ಸಮುದಾಯವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ರವರು ಈ ವಿಚಾರವನ್ನು ಹಿಂದೆಯೇ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದರು ಆದರೂ ಕಾರ್ಯರೂಪಕ್ಕೆ ಬರೆದಿರುವುದು ಬೇಸರದ ಸಂಗತಿಯಾಗಿದೆ.
ವಿಶ್ವಕರ್ಮ ಸಮುದಾಯವು ತಮ್ಮ ಶಿಲ್ಪಾ ಕಲಾ ವೃತ್ತಿಪರತೆಯಿಂದ ಕಾಶ್ಮೀರ ದಿಂದು ಕನ್ಯಾಕುಮಾರಿವರೆಗೂ ತಮ್ಮ ಚಾಪನ್ನು ಮೂಡಿಸಿದ್ದಾರೆ. ಎಲ್ಲಾ ಧರ್ಮಗಳ ಸೇವೆಯನ್ನು ಕೂಡ ಮಾಡಿದ್ದಾರೆ ಇದನ್ನು ಸಮಾಜ ಅರಿಯಬೇಕು.
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದು ಎಲ್ಲಾ ಸಮುದಾಯವು ಸಾಮರಸ್ಯದಿಂದ ಜೀವನವನ್ನು ನಡೆಸಬೇಕು. ವಿಶ್ವಕರ್ಮ ಸಮುದಾಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಕಂಡುಕೊಳ್ಳಲು ಮಠಕ್ಕೆ ಆಗಮಿಸಬೇಕು ತಮ್ಮ ಮಕ್ಕಳಿಗೆ ಉಪನಯನವನ್ನು ಮಾಡಿಸಬೇಕು ಆಗ ಮಾತ್ರ ಬಾಲ್ಯದಿಂದಲೇ ಸುಸಂಸ್ಕೃತ ವ್ಯಕ್ತಿಗಳಾಗಲು ಸಾಧ್ಯ. ವಿಶ್ವಕರ್ಮ ಸಮುದಾಯದ ಏಳಿಗೆಗೆ ಮತ್ತು ರಕ್ಷಣೆಗೆ ನಿಲ್ಲುವ ವ್ಯಕ್ತಿಯ ಪರವಾಗಿ ಮುಂದಿನ ಚುನಾವಣೆಯಲ್ಲಿ ನಾವು ನಿಲ್ಲುತ್ತೇವೆ ಎಂದು ತಿಳಿಸಿದರು.
ಶಾಸಕ ಕೆ. ಮಹದೇವ ಮಾತನಾಡಿ ಜಾತ್ಯತೀತ ಮೌಲ್ಯಗಳಿರಬೇಕಾದ ಮನಸ್ಥಿತಿಗಳಲ್ಲಿ ಜಾತಿಯ ಪಿಡುಗುಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇದರಿಂದಾಗಿ ಸಣ್ಣ ಪುಟ್ಟ ಸಮುದಾಯಗಳು ಇಂದಿಗೂ ಶೋಷಣೆಗೆ ಒಳಗಾಗುತ್ತಿದೆ. ವಿಶ್ವಕರ್ಮ ಸಮುದಾಯವು ಅಸಂಘಟಿತ ಸಮುದಾಯವಾಗದೆ ಸಂಘಟಿತ ಸಮುದಾಯವಾಗಬೇಕು ತಮಗೆ ದೊರಕಬೇಕಾದ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಲು ಜಾಗೃತರಾಗಬೇಕು. ಇತ್ತೀಚಿನ ದಿನಗಳಲ್ಲಿ ಮೂಲ ವೃತ್ತಿಯು ಕಷ್ಟಕರವಾಗಿದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರ ಮೂಲಕ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರಲ್ಲದೆ ವಿಶ್ವಕರ್ಮ ಸಮುದಾಯದ ಏಳಿಗೆಗೆ ನಾನು ಅನುದಾನವನ್ನು ಮುಂದೆಯೂ ಕೂಡ ನಾನು ನಿಮ್ಮ ಸೇವೆಗೆ ಸಿದ್ಧನಿದ್ದೇನೆ ಎಂದು ತಿಳಿಸಿದರು.
ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಮಹೇಶ್ ಆಚಾರ್ಯ ಮತ್ತು ಕಾರ್ಯದರ್ಶಿ ಈರಣ್ಣಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಮಾದೇವ,ವಿಶ್ವಕರ್ಮ ಸೇವಾ ಸಮಿತಿಯ ತಿರುನೀಲಕಂಠ,ರವಿಕುಮಾರ್, ಕಾಳಪ್ಪಚಾರ, ರಘು,ರಮೇಶ್, ಸುಬ್ರಮಣ್ಯ, ಶಂಕರ್,
ಗ್ರಾಮದ ಯಜಮಾನರಾದ ತಮ್ಮಣ್ಣೇಗೌಡ, ಬಸವರಾಜು,ಮುಖಂಡರಾದ ಅಣ್ಣಯ್ಯ ಶೆಟ್ಟಿ,ರಘುನಾಥ್ ಸೇರಿದಂತೆ ಮತಿತ್ತರರು ಹಾಜರಿದ್ದರು.