ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೂಡ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಕೆ. ಮಹದೇವ್ ಬೇಸರ ವ್ಯಕ್ತಪಡಿಸಿದರು.

ಪಿರಿಯಾಪಟ್ಟಣ : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೂಡ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಕೆ. ಮಹದೇವ್ ಬೇಸರ ವ್ಯಕ್ತಪಡಿಸಿದರು.

 ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ವ್ಯಾಪ್ತಿಯ ಚಾಮುಂಡೇಶ್ವರಿ ವಿದ್ಯುತ್ ಚಕ್ತಿ ಸರಬರಾಜು ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಬೆಳಕು ಯೋಜನೆಯ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸಂಪರ್ಕದ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.

 ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದೆ ಹಾಗೂ ಅನೇಕ ಸರ್ಕಾರಗಳು ಆಳ್ವಿಕೆ ಮಾಡಿದೆ ಆದರೂ ಕೂಡ ಜನಸಾಮಾನ್ಯರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರೆ ಆಡಳಿತ ಸರ್ಕಾರಗಳ ಯೋಜನೆಗಳು ಸಂಪೂರ್ಣವಾಗಿ ಜನರಿಗೆ ತಲುಪುತ್ತಿಲ್ಲ ಎಂದು ತಿಳಿಯಬೇಕಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸಿ ಸೌಲಭ್ಯ ಕೊಡಿಸುವಲ್ಲಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನಾನು ಶಾಸಕರಾದ ನಂತರ  ಅನೇಕ ಮೂಲಭೂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಮೂಲಭೂತ ಸೌಲಭ್ಯ ಕೊಡಿಸುವಲ್ಲಿ ಶ್ರಮಿಸುತ್ತಿದ್ದೇನೆ. ವಸತಿ ರೈತರಿಗೆ ವಸತಿ ನಿರ್ಮಾಣ, ರೈತರಿಗೆ ವ್ಯವಸಾಯಕ್ಕೆ ಬೇಕಾಗಲು 150 ಕೆರೆಗೆ ನೀರು ಹರಿಸುವ ಯೋಜನೆ, ತಾಲೂಕಿನ ಜನತೆ ಕುಡಿಯಲು ಯೋಗ್ಯವಾದ ಕಾವೇರಿ ನೀರಿನ ಸರಬರಾಜು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಅದೇ ರೀತಿ ವಿದ್ಯುತ್ ಸಂಪರ್ಕವಿಲ್ಲದ ಅನೇಕ ಕುಟುಂಬಗಳನ್ನು ಗುರುತಿಸಿ ಇಂದು ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದೇನೆ ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರಲ್ಲದೆ ಈ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಯಾರಾದರೂ ಅಧಿಕಾರಿಗಳು ಗ್ರಾಹಕರಿಂದ ಹಣವನ್ನು ಪಡೆದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

 ಬೆಟ್ಟದಪುರ ವಿದ್ಯುತ್ ಸರಬರಾಜು ನಿಗಮದ ಅಭಿಯಂತರ ಆಕಾಶ್ ಮಾತನಾಡಿ ತಾಲೂಕಿನಲ್ಲಿ 34 ಗ್ರಾಮ ಪಂಚಾಯಿತಿಗಳ ವತಿಯಿಂದ  2,000 ಅರ್ಜಿಗಳು ಬೆಳಕು ಯೋಜನೆಗೆ ಬಂದಿದ್ದು,ಇದರಲ್ಲಿ 654   ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದಕ್ಕೆ 32 ಲಕ್ಷ ರು ವೆಚ್ಚ ತಗಲುತ್ತದೆ. ಈ ಯೋಜನೆಯು  ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಪ್ರಥಮವಾಗಿ ಜಾರಿಗೆ ಬಂದಿದೆ. ಈ ಯೋಜನೆಯು ಜಾರಿಗೆ ಬರಲು ಶಾಸಕರು ಬಹಳ ಶ್ರಮಿಸಿದ್ದು ಅವರಿಗೆ ಇಲಾಖೆ ವತಿಯಿಂದ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

 ಈ ಸಂದರ್ಭದಲ್ಲಿ ತಹಸೀಲ್ದಾರ್ ಯದು ಗಿರೀಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೆ. ಮಹೇಶ್, ಮಾಜಿ ತಾ ಪಂ ಸದಸ್ಯ ರಘುನಾಥ್,ಪಿರಿಯಾಪಟ್ಟಣ ಚೆಸ್ಕಾಂ ಅಭಿಯಂತರ ಗುರುಬಸವರಾಜ್, ಶಾಖಾ ಅಧಿಕಾರಿಗಳಾದ ಪ್ರಶಾಂತ್, ಶಶಿಕುಮಾರ್,ಸುನಿಲ್ ಕುಮಾರ್ ಯಾದವ್, ಚಂದ್ರಶೇಖರ್ ಭೋಜೆಶ್, ಜಗದೀಶ್, ರವಿ, ಗಣೇಶ, ಹರವೇಗೌಡ ಸೇರಿದಂತ್ತೆ ಮತಿತ್ತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top