ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಪಿರಿಯಾಪಟ್ಟಣ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಕಡಿಮೆ ಮತ ನೀಡಿದ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇನೆ, ಮುಂದಿನ ದಿನವಾದರೂ ಕೆಲಸ ಮಾಡುವವರಿಗೆ ನಿಮ್ಮ ಸಹಕಾರ ಇರಬೇಕೆಂದು ಶಾಸಕ ಕೆ. ಮಹಾದೇವ್ ಮನವಿ ಮಾಡಿದರು.
 ಬೆಟ್ಟದಪುರ ಹೋಬಳಿಯ ವಿವಿಧ ಗ್ರಾಮದಲ್ಲಿ ಒಟ್ಟು ₹ 1.71 ಕೋಟಿ ರೂಗಳ ವೆಚ್ಚದಲ್ಲಿ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಳ್ಳಿಕೊಪ್ಪಲು ಗ್ರಾಮದ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಆಯ್ಕೆ ಯಾದಾಗಿನಿಂದ, ಒಂದು ವರ್ಷ ಅತಿವೃಷ್ಟಿ ಮತ್ತೆರಡು ವರ್ಷ ಕೊರೊನಾ ಈ ಮೂರು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ, ಇನ್ನು ಉಳಿದ ಅವಧಿಯಲ್ಲಿ ತಾಲ್ಲೂಕಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ತಾಲ್ಲೂಕಿನಲ್ಲಿ ಶಾಂತಿಯುತವಾದ ರಾಜಕಾರಣ ಮಾಡಿದ್ದೇನೆ, ವಿರೋಧಿಗಳು ನನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದರು ಸಹ ನಾನು ಅದಕ್ಕೆ ತಲೆಕೆಡಿಸಿಕೊಳ್ಳದೆ ಜನರಿಗೆ ಕೊಟ್ಟ ಮಾತಿನಂತೆ ಅವರ ಕೆಲಸಕ್ಕೆ ಮಾತ್ರ ಆದ್ಯತೆ ನೀಡಿದ್ದೇನೆ, ನಾನು ಯಾವುದೇ ಜಾತಿ ಭೇದ ಎನ್ನದೆ ಎಲ್ಲಾ ಸಮುದಾಯದವರ ಸಲಹೆ ಸೂಚನೆಯನ್ನು ಪಾಲಿಸಿ ಅಭಿವೃದ್ಧಿಗೆ ಮಾತ್ರ ಸಹಕರಿಸಿದ್ದೇನೆ ಎಂದರು. ಮುಂದಿನ ಚುನಾವಣೆಯು ನನ್ನ ಕೊನೆಯ ಚುನಾವಣೆಯಾಗಿದ್ದು, ಗ್ರಾಮಾಂತರ ಭಾಗದ ಎಲ್ಲಾ ಜನರು ಒಟ್ಟಾಗಿ ಮತ್ತೊಂದು ಅವಕಾಶ ನೀಡಿದರೆ ಪಿರಿಯಾಪಟ್ಟಣ ತಾಲ್ಲೂಕಿನ ಸರ್ವಾಂಗಿನ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

 ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಹಾಗೂ ಯುವ ಮುಖಂಡ ಗಗನ್, ಮುಖಂಡ ದೇವರಾಜು ಮಾತನಾಡಿದರು.

 ಇದೆ ವೇಳೆ ಹರದೂರು, ಕಗ್ಗಲಿಕೊಪ್ಪಲು, ವಡ್ಡರಹಳ್ಳಿ, ಮರದೂರು, ಮರಿಗೌಡನಕೊಪ್ಪಲು, ಮೇಲೂರು, ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು.

 ತಾಲ್ಲೂಕು ಜೆಡಿಎಸ್ ಕಾರ್ಯದರ್ಶಿ ವಿದ್ಯಾಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ಕಿತ್ತೂರುದಿನೇಶ್, ಮುಖಂಡರಾದ ಮಲ್ಲಿಕಾರ್ಜುನ, ದೊರೆಸ್ವಾಮಿ, ಚಿಕ್ಕೇಗೌಡ, ಪಟೇಲ್ ನಟೇಶ್ , ಸಿರಿಯಾಳಶೆಟ್ಟಿ ಆಹಾರ ಶಿರಸ್ತೆದಾರ್ ಸಣ್ಣಸ್ವಾಮಿ, ಹಾಗೂ ಮಂಜುನಾಥ್, ಹಾರಂಗಿ ಇಲಾಖೆ ಎಇಇ ರಂಗಯ್ಯ, ಪಿಡಿಒ ಮನು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top