ಪಿರಿಯಾಪಟ್ಟಣ: ಪಟ್ಟಣದ ಬಿ.ಎಂ ಮುಖ್ಯ ರಸ್ತೆಯಲ್ಲಿ ಮೈಮುಲ್ ವತಿಯಿಂದ ನಿರ್ಮಾಣವಾಗಿರುವ ನಂದಿನಿ ಗೆಲಾಕ್ಸಿ ಉದ್ಘಾಟಿಸಿ ಶಾಸಕ ಕೆ.ಮಹದೇವ್ ಮಾತನಾಡಿದರು,
ನಗರ ಪ್ರದೇಶಗಳಂತೆ ತಾಲೂಕು ಪ್ರದೇಶಗಳಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆದು ರೈತರ ಸಂಸ್ಥೆಯಾದ ಕೆಎಂಎಫ್ ವತಿಯಿಂದ ನೂರಕ್ಕೂ ಹೆಚ್ಚು ವಿವಿಧ ಬಗೆ ಉತ್ಪನ್ನಗಳನ್ನು ಸ್ಥಳೀಯವಾಗಿ ಒದಗಿಸಲಾಗುತ್ತಿದೆ, ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕಿನಿಂದ ಅತಿ ಹೆಚ್ಚು ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದ್ದು ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸತ್ಯಗಾಲ ಗ್ರಾಮ ಬಳಿ ಫೀಡ್ಸ್ ಫ್ಯಾಕ್ಟರಿ ನಿರ್ಮಿಸಲು ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ನಂತರ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಹೈನುಗಾರಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಯುಗಾದಿ ಹಬ್ಬದ ವಿಶೇಷವಾಗಿ ಮಾ.16 ರಿಂದ ಹಾಲಿನ ದರವನ್ನು 1 ರೂ ಹೆಚ್ಚಳ ಮಾಡಿ ರೈತರ ಹಿತ ಕಾಪಾಡಲಾಗುತ್ತಿದೆ. ನಮ್ಮ ಆಡಳಿತಾವಧಿಯಲ್ಲಿ ಮೈಮೂಲ್ ಒಕ್ಕೂಟದಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ರಾಜ್ಯದಲ್ಲಿಯೇ ಅತಿ ಹೆಚ್ಚು ನೀಡುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಸಹಕರಿಸಲಾಗುತ್ತಿದೆ, ಒಕ್ಕೂಟ ವತಿಯಿಂದ ಹಲವಾರು ಸವಲತ್ತುಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ಒದಗಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಅತಿ ಹೆಚ್ಚು ಬಿಎಂಸಿ ಕೇಂದ್ರ ಹಾಗೂ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ರೈತರ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭ ಮೈಮುಲ್ ನಿರ್ದೇಶಕರಾದ ಎಚ್.ಡಿ ರಾಜೇಂದ್ರ, ಎ.ಟಿ ಸೋಮಶೇಖರ್, ಮಹೇಶ್, ಉಮಾಶಂಕರ್, ಲೀಲಾಂಬಿಕೆ, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಪುರಸಭಾ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ನಿರಂಜನ್, ಪ್ರಕಾಶ್ ಸಿಂಗ್, ಭಾರತಿ, ಮಂಜುನಾಥ್ ಸಿಂಗ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ,
ಜಿ.ಪಂ ಮಾಜಿ ಸದಸ್ಯ ಕೆ.ಎಸ್ ಮಂಜುನಾಥ್, ಮುಖಂಡರಾದ ಕುಪ್ಪಳ್ಳಿ ಸೋಮಣ್ಣ, ಗೆಲಾಕ್ಸಿ ಮಾಲಿಕರಾದ ಜಾಕಿ ಸುರೇಶ್, ರೇಖಾಸುರೇಶ್ ಹಾಗು ಮೈಮೂಲ್ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.